ಮಡಿಕೇರಿ, ಮೇ 16: ನಗರದ ಶ್ರೀ ಭದ್ರಕಾಳಿ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ತಾ. 20 ಮತ್ತು 21 ರಂದು ನಡೆಯಲಿದೆ. ತಾ. 20 ರಂದು ಸಂಜೆ ಗುರು ಗಣಪತಿ ಪೂಜೆ, ಶುದ್ಧಿ ಪುಣ್ಯ ವಾಚನ, ಸ್ಥಳ ಶುದ್ಧಿ, ವಾಸ್ತು ಮಂಡಲ ಪೂಜೆ, ವಾಸ್ತು ಹೋಮ, ದಿಕ್ಪಾಲಕ ಬಲಿ, ತಾ. 21 ರಂದು 7 ಗಂಟೆಗೆ ಗಣಪತಿ ಹೋಮ, 10.30 ಗಂಟೆಗೆ ದುರ್ಗಾ ಹೋಮ, 11 ಗಂಟೆಗೆ ನಾಗÀ ದೇವನಿಗೆ ಹೂವಿನ ಅಲಂಕಾರ, ಮಧ್ಯಾಹ್ನ 12 ಗಂಟೆಗೆ ತಾಯಿಗೆ ಹೂವಿನ ಅಲಂಕಾರ, 12.30 ಗಂಟೆಗೆ ಮಹಾ ಮಂಗಳಾರತಿ, ಮಧ್ಯಾಹ್ನ 1 ಗಂಟೆಗೆ ದರ್ಶನ ನಡೆಯಲಿದೆ.