ಒಡೆಯನಪುರ, ಮೇ 16: ಗೋಪಾಲಪುರ ಗ್ರಾಮದ ಲಾರೆನ್ಸ್ ಮಿನೇಜಸ್ ಮತ್ತು ಸೆಲೆನ್ ಮೀನೆಜಸ್ ದಂಪತಿ ಪುತ್ರ ಸುಪ್ರಿತ್ ಮಿನೇಜಸ್ ಚಿಕ್ಕಮಗಳೂರು ಕ್ರೈಸ್ತ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ. ಟಿ. ಅಂಥೋಣಿ ಅವರಿಂದ ಹಸ್ತ ಯೋಜಕ ದೀಕ್ಷಾ ಸಂಸ್ಕಾರವನ್ನು ಸ್ವೀಕರಿಸಿದರು.
ಸದರಿ ಚರ್ಚ್‍ನಲ್ಲಿ ನಡೆದ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಚರ್ಚ್‍ಗಳ ಮುಖ್ಯಸ್ಥರು, ಭಕ್ತಾದಿಗಳು, ಕ್ರೈಸ್ತ ಬಾಂಧವರು ದೀಕ್ಷಾ ಸಂಸ್ಕಾರ ಸ್ವೀಕರಿಸಿದರು. ಈ ಸಂದರ್ಭ ನೂತನ ಫಾದರ್ ಸುಪ್ರಿತ್ ಮಿನೇಜಸ್ ಅವರ ಆದ್ಯಾತ್ಮಿಕ ಜೀವನ ಹಾಗೂ ಶೈಕ್ಷಣಿಕ ಕಾರ್ಯಗಳಿಗೆ ಸಹಕಾರ ಪ್ರೋತ್ಸಾಹ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಅನ್ನದಾನವನ್ನು ಏರ್ಪಡಿಸಲಾಗಿತ್ತು.