ಮಡಿಕೇರಿ, ಮೇ 16 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪಂಗಡ ನೌಕರರ ಸಂಘದ ಪುತ್ತೂರು ವಿಭಾಗ, ಮಡಿಕೇರಿ ಘಟಕದ ವತಿಯಿಂದ ತಾ. 17 ರಂದು (ಇಂದು) ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆ ಸಮಾರಂಭ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಮಡಿಕೇರಿ ಡಿಪೋ ಬಳಿಯಿಂದ ಡಾ.ಅಂಬೇಡ್ಕರ್ ರಥ ಮೆರವಣಿಗೆ ಮತ್ತು 10 ಗಂಟೆಗೆ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.