ಮಡಿಕೇರಿ, ಮೇ 16 : ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪವನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತವು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೊಡನೆ ಡಾ.ವಿಜಯ್ ಅಂಗಡಿ ಅವರು ನಡೆಸಿದ ಸಂದರ್ಶನವು ಮಡಿಕೇರಿ ಆಕಾಶವಾಣಿಯಿಂದ ಶುಕ್ರವಾರ ಬೆಳಗ್ಗೆ 8:35 ಕ್ಕೆ, ಸಂಜೆ 5:30ಕ್ಕೆ ಹಾಗೂ ಶನಿವಾರ ಮಧ್ಯಾಹ್ನ 1:20ಕ್ಕೆ, ಸಂಜೆ 6:50ಕ್ಕೆ ಬಿತ್ತರವಾಗಲಿದೆ.