ವೀರಾಜಪೇಟೆ, ಮೇ 15: ಕೊಡಗು ಹಿಂದೂ ಮಲಯಾಳಿ ಮಹಿಳಾ ಘಟಕ ಕೊಡಗು ಜಿಲ್ಲೆಗೂ ಅಗತ್ಯವಿದ್ದು ಇಂದು ಹಿಂದೂ ಮಲಯಾಳಿ ಅಸೋಸಿಯೇಶನ್, ಸಮುದಾಯ ಬಾಂಧವರಿಗಾಗಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ಅಸೋಸಿಯೇಶನ್ ನೊಂದಿಗೆ ಕೈಜೋಡಿಸಲಿದೆ ಎಂದು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಶನ್‍ನ ಅಧ್ಯಕ್ಷೆ ಶೀಬಾಪೃಥ್ವಿನಾಥ್ ಹೇಳಿದರು.
ಕೊಡಗು ಹಿಂದೂ ಮಲಯಾಳಿ ವೀರಾಜಪೇಟೆ, ಮೇ 15: ಕೊಡಗು ಹಿಂದೂ ಮಲಯಾಳಿ ಮಹಿಳಾ ಘಟಕ ಕೊಡಗು ಜಿಲ್ಲೆಗೂ ಅಗತ್ಯವಿದ್ದು ಇಂದು ಹಿಂದೂ ಮಲಯಾಳಿ ಅಸೋಸಿಯೇಶನ್, ಸಮುದಾಯ ಬಾಂಧವರಿಗಾಗಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ಅಸೋಸಿಯೇಶನ್ ನೊಂದಿಗೆ ಕೈಜೋಡಿಸಲಿದೆ ಎಂದು ಹಿಂದೂ ಮಲಯಾಳಿ ಮಹಿಳಾ ಅಸೋಸಿಯೇಶನ್‍ನ ಅಧ್ಯಕ್ಷೆ ಶೀಬಾಪೃಥ್ವಿನಾಥ್ ಹೇಳಿದರು.
ಕೊಡಗು ಹಿಂದೂ ಮಲಯಾಳಿ ಅಸೋಸಿಯೇಶನ್‍ನ್ನು ಪ್ರೀತಾ ವಿನೋದ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಜಾನ್ಸಿ ಕಿರಣ್, ಬೊಪ್ಪಂಡ ಜೂನ, ಎನ್.ಎಸ್.ಪ್ರಶಾಂತ್, ಡಿ.ಸಿ.ಧ್ರುವ, ಕೆ.ಬಿ.ಹರ್ಷವರ್ಧನ್, ಯಶೋಧ ಮಂದಣ್ಣ, ಎಂ.ಪಿ.ಪುಷ್ಪಲತ ಶಿವಪ್ಪ, ಸುಶ್ಮಿತ ಮಹೇಶ್, ಪೂರ್ಣಿಮಾ ಸಚಿಂದ್ರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪುಷ್ಪಲತ ಶಿವಪ್ಪ ಅವರ ‘ಮೌನಗಳ ಸೆರೆಯಲ್ಲಿ’ ಕವನ ಸಂಕಲನವನ್ನು ಕೂರ್ಗ್ ವ್ಯಾಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮಾ ಚಿತ್ರಭಾನು ಬಿಡುಗಡೆ ಗೊಳಿಸಿದರು. ನಂತರ ಲೇಖಕ ವಿನೋದ್ ಹಾಗೂ ಡಾ. ಅಕ್ಷಯ ಇವರುಗಳನ್ನು ಸನ್ಮಾನಿಸಲಾಯಿತು.
ಮಲಯಾಳಿ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸುಮಾರು 30ತಂಡಗಳು ಭಾಗವಹಿಸಿದ್ದವು. ವೀರಾಜಪೇಟೆ ಮಲಯಾಳಿ ಮಹಿಳಾ ಸದಸ್ಯರಿಂದ ಹಮ್ಮಿಕೊಂಡಿದ್ದ ತಿರುವಾದಿರ ನೃತ್ಯ ಹಾಗೂ ಮಲಯಾಳಿಗಳ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಮಹಿಳೆಯರ ತಾಲಪೊಲಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು.