ಕೆದಮುಳ್ಳೂರು, ಮೇ 15: ಕಾಕೋಟು ಪರಂಬು ಪ್ರಾಥÀಮಿಕ ಶಾಲಾ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಕೊಡವ ಕುಟುಂಬಗಳ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಹಾಕಿಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.

ಹಾಕಿ ಕೂರ್ಗ್ ಸಂಸ್ಥೆಯ ಮೂಲಕ ಇಂಡಿಯನ್ ಕ್ಯಾಂಪ್‍ನಲ್ಲಿ ಸ್ಥಾನ ಪಡೆದುಕೊಂಡ ಮಲ್ಲಮಾಡ ಲೀಲಾವತಿ, ರಿಶ್ಮಿಕಾ, ತಿಮ್ಮಯ್ಯ, ಕೃತಿಕಾ, ಸಂಧ್ಯಾ, ಪದ್ಮಲತಾ, ಐನಂಡ ಆಕಾಶ್ ಪೂವಣ್ಣ, ಮಂಡಲ್, ಚೇತನ್, ಸೂರ್ಯ, ಚಂದುರ ಪೊನ್ನಣ್ಣ, ಕುಪ್ಪಂಡ ಸೋಮಯ್ಯ ಹಾಗೂ ಅಂತರ್ರಾಷ್ಟ್ರೀಯ ಅಂಪೈರ್ ಆಗಿರುವ ಕೋಡೀರ ಕೀರ್ತಿ ಮುತ್ತಪ್ಪ ಅವರುಗಳನ್ನು ಸನ್ಮಾನಿಸಲಾಯಿತು.