ಮಡಿಕೇರಿ, ಮೇ 14: ಗಾಳಿಬೀಡುವಿನ ಒಂದನೇ ಮೊಣ್ಣಂಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಗಣಪತಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ತಾ. 11 ರಿಂದ 13 ರ ತನಕ ನೆರವೇರಿತು. ಕಳೆದ 24 ವರ್ಷಗಳಿಂದ ಸಾಂಕೇತಿಕವಾಗಿ ಪೂಜೆಯೊಂದಿಗೆ ಚೌತಿಯ ಸಂದರ್ಭ ದೈವಿಕ ಕೈಂಕರ್ಯ ನಡೆಯುತ್ತಿದ್ದು, ಇದೀಗ ಕಾಸರಗೋಡುವಿನ ಪುಂಡೂರು ಗೋಪಾಲಕೃಷ್ಣ ಕೆದಿಲಾಯ ನೇತೃತ್ವದಲ್ಲಿ ಪೂಜಾ ಮೂರ್ತಿಯ ಪ್ರತಿಷ್ಠಾಪನೆ ಜರುಗಿತು.
ತಾ. 11 ರಂದು ಸಂಜೆ ಉಗ್ರಾಣಪೂಜೆಯೊಂದಿಗೆ ದೈವಿಕ ಕೈಂಕರ್ಯಗಳು ಆರಂಭಗೊಂಡು, ತಾ. 12 ರಂದು ಸ್ಥಳ ಶುದ್ಧಿ, ಅಂಕುರಪೂಜೆ, ಗಣಹೋಮ, ಪಂಚತತ್ವ ಹೋಮ, ಕಲಾಹೋಮ, ಧಾನ್ಯಾಧಿವಾಸ, ಅಂಕುರಪೂಜೆ ನೆರವೇರಿತು. ತಾ. 13 ರಂದು ಬೆಳಿಗ್ಗೆ 7.10 ಗಂಟೆಗೆ ವೃಷಭ ಲಗ್ನದಲ್ಲಿ ದೇವರ ಪ್ರತಿಷ್ಠೆಯೊಂದಿಗೆ ಮಹಾ ಕಲಶಾಭಿಷೇಕ, ಮಹಾಪೂಜೆಯೊಂದಿಗೆ ದೇವತಾ ಕಾರ್ಯಗಳು ನೆರವೇರಿತು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಹಾಗಣಪತಿಯ ಕೃಪೆಗೆ ಪಾತ್ರರಾದರು.