ಸಿದ್ದಾಪುರ, ಮೇ 14: ಸಿದ್ದಾಪುರ ನಗರದ 3 ಎಟಿಎಂ ಕೇಂದ್ರ ಸೇರಿದಂತೆ ಈ ವ್ಯಾಪ್ತಿಯ ಒಟ್ಟು 4 ಎಟಿಎಂ ಕೇಂದ್ರಗಳು ಬಹುತೇಕ ಸಮಯಗಳಲ್ಲಿ ಬೀಗ ಹಾಕಿರುವದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಪ್ರವಾಸಿಗರು ಹಾಗೂ ಸಾರ್ವಜನಿಕರು ಹಣಕ್ಕಾಗಿ ಸಿದ್ದಾಪುರದ ಒಂದು ಎಟಿಎಂ ಕೇಂದ್ರದಿಂದ ಮತ್ತೊಂದು ಎಟಿಎಂ ಕೇಂದ್ರಕ್ಕೆ ತೆರಳಿದರೂ, ನಗರದ ಎಲ್ಲಾ ಎಟಿಎಂ ಕೇಂದ್ರಗಳು ಬೀಗ ಹಾಕಿರುವದರಿಂದ ಶಾಪ ಹಾಕಿ ಹಿಂತಿರುಗುತ್ತಿದ್ದಾರೆ. ಸಿದ್ದಾಪುರ ಮುಖ್ಯರಸ್ತೆಯಲ್ಲಿ ಕೆನರಾ ಬ್ಯಾಂಕ್, ವೀರಾಜಪೇಟೆ ರಸ್ತೆಯಲ್ಲಿ ವಿಜಯ ಬ್ಯಾಂಕ್ ಹಾಗೂ ಮೈಸೂರು ರಸ್ತೆಯಲ್ಲಿ ಮುತ್ತೂಟ್ ಫೈನಾನ್ಸ್ ಎಟಿಎಂ ಕೇಂದ್ರಗಳಿವೆ. ಇವು ಮುಚ್ಚಿರುವದರಿಂದ 2 ಕಿ.ಮೀ. ದೂರದ ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಕಾರ್ಪೋರೇಶನ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿದರೆ, ಅಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಒಟ್ಟಿನಲ್ಲಿ ಬಹುತೇಕ ಸಮಯಗಳಲ್ಲಿ ಬೀಗ ಹಾಕಿರುವ ಎಟಿಎಂ ಕೇಂದ್ರಗಳು ಕೆಲವು ಸಮಯದಲ್ಲಿ ತೆರೆದರೂ ಹಣ ಮಾತ್ರ ಇರುವದಿಲ್ಲ. ಸಾರ್ವಜನಿಕರಿಗೆ ಉಪಕಾರವಿಲ್ಲದ ಎಟಿಎಂ ಕೇಂದ್ರಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.