ಶನಿವಾರಸಂತೆ, ಮೇ 14: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳ್ಳೂರಿನಲ್ಲಿ ಬೇಸಿಗೆ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದ್ದು “ಒಂದಷ್ಟು ಓದು ಒಂದಷ್ಟು ಮೋಜು” ಶೀರ್ಷಿಕೆಯಲ್ಲಿ ಪ್ರತಿನಿತ್ಯ ವಿನೂತನ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವದರ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಮಣ್ಣಿನಿಂದ ಕಲಾಕೃತಿಗಳ ರಚನೆ, ವಿವಿಧ ಪ್ರಾಣಿ ಪಕ್ಷಿಗಳ ಮುಖವಾಡ ತಯಾರಿಕೆ, ಚಿತ್ರಕಲೆ, ಕ್ರಾಫ್ಟ್ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಕ್ಯಾಲಿಗ್ರಫಿ ಬರವಣಿಗೆಯ ಅಭ್ಯಾಸ ಮಾಡಿಸಲಾಯಿತು.