ಸುಂಟಿಕೊಪ್ಪ, ಮೇ 14: ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವದ ಅಂಗವಾಗಿ ಫ್ರಾನ್ಸಿಸ್ ಜಾಕ್ಸನ್ ಪಿ.ಜೆ. ಅವರಿಂದ ಆಡಂಬರ ಬಲಿ ಪೂಜೆ ಹಾಗೂ ಪರಮಪ್ರಸಾದ ಆಶೀರ್ವಚನ ನೀಡುವದರೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.

ಮಹೋತ್ಸವದ ಅಂಗವಾಗಿ 3 ದಿನಗಳ ಪ್ರಾರ್ಥನೆ ಹಾಗೂ ಮಕ್ಕಳಿಗೆ ಗುರುದೀಕ್ಷೆ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಮಹೋತ್ಸವ ಜರುಗಿತು.

ಬಲಿಪೂಜೆ ಹಾಗೂ ಪ್ರಾರ್ಥನಾ ಕೂಟವನ್ನು ನೂತನ ಧರ್ಮಗುರು ಫ್ರಾನ್ಸಿಸ್ ಜಾಕ್ಸನ್ ನೀಡಿದರು. ವಿವಿಧ ಧರ್ಮಕೇಂದ್ರಗಳಿಂದ ಆಗಮಿಸಿದ್ದ 20ಕ್ಕೂ ಮಿಕ್ಕಿ ಧರ್ಮಗುರುಗಳು ಈ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.