ಸುಂಟಿಕೊಪ್ಪ, ಮೇ 14: ಕೆದಕಲ್ ಗ್ರಾಮ ಪಂಚಾಯಿತಿಯ ವಿಕ್ರಮ್ ಬಡಾವಾಣೆಯ ಶ್ರೀ ಆದಿಕೊರತಿ ಅಮ್ಮ ದೇವಸ್ಥಾನದ ಮೇಲ್ಛಾವಣಿ ನಿರ್ಮಾಣಕ್ಕೆ ಪಂಚಾಯಿತಿ ಅನುದಾನದಲ್ಲಿ ರೂ. 1.15 ಲಕ್ಷ ನೀಡಿದ ಪಂಚಾಯಿತಿ ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ ಅವರನ್ನು ಆದಿಕೊರತಿ ಅಮ್ಮನವರ ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಪಂಚಾಯಿತಿ ವತಿಯಿಂದ ದೇವಸ್ಥಾನಕ್ಕೆ ಹೆಚ್ಚುವರಿ ಕೊಠಡಿ ನಿರ್ಮಿಸಿ ಕೊಡುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಬಿ.ಆರ್. ಸಂತೋಷ್ (ದಿನು), ಉಪಾಧ್ಯಕ್ಷ ಆನಂದ, ಕಾರ್ಯದರ್ಶಿ ಮಂಜು, ಖಜಾಂಚಿ ಬಿ.ಆರ್. ಸತೀಶ ಹಾಗೂ ಗ್ರಾಮಸ್ಥರು ಹಾಜರಿದ್ದರು.