ಮಡಿಕೇರಿ, ಮೇ 14: ಪ್ರಸಕ್ತ ಮುಂಗಾರು ಅವಧಿಯಲ್ಲಿ ತೀವ್ರ ಅತಿವೃಷ್ಟಿಯಿಂದ ಸಂಭವಿಸಬಹುದಾದ ಭೂಕುಸಿತ ಹಾಗೂ ಪ್ರವಾಹ ಎದುರಿಸಲು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳ 32 ಗ್ರಾಮ ಪಂಚಾಯಿತಿಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಈಗಾಗಲೇ ಪ್ರಕಟಿಸಲಾಗಿದ್ದ ನೋಡಲ್ ಅಧಿಕಾರಿಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದ್ದು, ವಿವರ ಇಂತಿದೆ.

ಕೆ. ನಿಡುಗಣೆ ಗ್ರಾ.ಪಂ.ಯ ದೇವಸ್ತೂರು, ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಮತ್ತು ಗಾಳಿಬೀಡು ಗ್ರಾ.ಪಂ.ಯ ಕಾಲೂರು, ನಿಡುವಟ್ಟು ಮತ್ತು ಬಾರಿಬೆಳ್ಳಚ್ಚು ಗ್ರಾಮಕ್ಕೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು ದೂ.ಸಂ : 8277931901 ಮತ್ತು 9900594717, ಮಕ್ಕಂದೂರು ಗ್ರಾ.ಪಂ.ಯ ತಂತಿಪಾಲ, ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಬಡಿಗೇರಿ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್ 9886907455, ಮಕ್ಕಂದೂರು ಗ್ರಾ.ಪಂ. ಉದಯಗಿರಿ, ಮಕ್ಕಂದೂರು, ಹೆಮ್ಮತ್ತಾಳು ಗ್ರಾಮಗಳಿಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಶಿವಕುಮಾರ್ 9741999571, ಮದೆ ಗ್ರಾ.ಪಂ.ಯ ಕಾಟಕೇರಿ, ಜೋಡುಪಾಲ, ಮದೆ ಮತ್ತು 2ನೇ ಮೊಣ್ಣಂಗೇರಿ ಗ್ರಾಮಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ಹೇಮಂತ್‍ಕುಮಾರ್ 9980240966, ಗಾಳಿಬೀಡು ಗ್ರಾ.ಪಂ.ಯ ಗಾಳಿಬೀಡು, ಹಮ್ಮಿಯಾಲ, 1ನೇ ಮೊಣ್ಣಂಗೇರಿ ಗ್ರಾಮಗಳಿಗೆ ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ 9448045062, ಕೆ. ನಿಡುಗಣೆ ಗ್ರಾ.ಪಂ.ಯ ಕರ್ಣಂಗೇರಿ, ಕೆ. ನಿಡುಗಣೆ ಗ್ರಾಮೀಣ ಗ್ರಾಮಗಳಿಗೆ ಬಿ.ಸಿಎಂ. ವಿಸ್ತರಣಾಧಿಕಾರಿ ಕವಿತ ಪಿ.ಪಿ. 9448205919, ಮದೆ ಗ್ರಾ.ಪಂ.ಯ ಬೆಟ್ಟತ್ತೂರು ಗ್ರಾಮಕ್ಕೆ ಮತ್ತು ಸಂಪಾಜೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ 9448504537, ಮೇಕೇರಿ ಗ್ರಾ.ಪಂ.ಯ ಮೇಕೇರಿ ಮತ್ತು ಬಿಳಿಗೇರಿ ಗ್ರಾಮ ಹಾಗೂ ಮರಗೋಡು ಗ್ರಾ.ಪಂ.ಯ ಮರಗೋಡು ಮತ್ತು ಸೊಡ್ಲೂರು ಕಟ್ಟೆಮಾಡು ಗ್ರಾಮಗಳಿಗೆ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್. 9845621719, ಕುಂದಚೇರಿ ಗ್ರಾ.ಪಂ.ಯ ಕುಂದಚೇರಿ, ಕೋಪಟ್ಟಿ, ಸಿಂಗತ್ತೂರು ಗ್ರಾಮಗಳಿಗೆ ಹಾಗೂ ಚೇರಂಬಾಣೆ ಗ್ರಾ.ಪಂ.ಯ ಬೇಂಗೂರು, ಬಿ. ಬಾಡಗ, ಕೊಳಗದಾಳು ಗ್ರಾಮಗಳಿಗೆ ಮಡಿಖೇರಿ ಅಬಕಾರಿ ಉಪ ಆಯುಕ್ತ ಮಧುಸೂದನ ರೆಡ್ಡಿ 9449597135.

ಕಾಂತೂರು-ಮೂರ್ನಾಡು ಗ್ರಾ.ಪಂ.ಯ ಕಾಂತೂರು, ಕಿಗ್ಗಾಲು, ಎಂ. ಬಾಡಗ, ಮುತ್ತಾರ್ಮುಡಿ ಗ್ರಾಮಗಳಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲಕೃಷ್ಣ 9845152053, ಹೊದ್ದೂರು ಗ್ರಾ.ಪಂ.ಯ ಹೊದ್ದೂರು, ಕುಂಬಳದಾಳು ಮತ್ತು ಹೊದವಾಡ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ 7760221461.

ಗರ್ವಾಲೆ ಗ್ರಾ.ಪಂ.ಯ ಗರ್ವಾಲೆ, ಶಿರಂಗಳ್ಳಿ, ಸೂರ್ಲಬ್ಬಿ ಗ್ರಾಮಗಳಿಗೆ ಮಡಿಕೇರಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ 9448999277, ಮಾದಾಪುರ ಗ್ರಾ.ಪಂ.ಯ ಕುಂಬೂರು, ಕಾಂಡನಕೊಲ್ಲಿ, ಮೂವತ್ತೊಕ್ಲು ಗ್ರಾಮಗಳಿಗೆ ಮಡಿಕೇರಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ 9480869100, ಕುಶಾಲನಗರ ಟೌನ್ ಮತ್ತು ಮುಳ್ಳುಸೋಗೆ ಗ್ರಾಮಗಳಿಗೆ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್ 9740434089, ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾ.ಪಂ.ಯ ಬೆಂಡೆಬೆಟ್ಟ ಅರಣ್ಯ, ಮಾವಿನಹಳ್ಳ ಅರಣ್ಯ, ಜೇನುಕಲ್ಲುಬೆಟ್ಟ ಅರಣ್ಯ, ಹೆಬ್ಬಾಲೆ, ಮರೂರು ಮತ್ತು ಹುಲುಸೆ ಗ್ರಾಮಗಳಿಗೆ ಸೋಮವಾರಪೇಟೆ ಬಿ.ಸಿಎಂ. ವಿಸ್ತರಣಾಧಿಕಾರಿ ಶ್ರೀಕಾಂತ್ 9632225847, ಚೆಟ್ಟಳ್ಳಿ ಗ್ರಾ.ಪಂ.ಯ ಚೇರಳ ಶ್ರೀಮಂಗಳ, ಈರಳೆವಳಮುಡಿ, ಕೂಡ್ಲೂರು ಚೆಟ್ಟಳ್ಳಿ, ನೆಲ್ಲಿಹುದಿಕೇರಿ ಗ್ರಾ.ಪಂ.ಯ ನೆಲ್ಲಿಹುದಿಕೇರಿ, ವಾಲ್ನೂರು-ತ್ಯಾಗತ್ತೂರು, ಅಭ್ಯತ್‍ಮಂಗಲಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹೆಚ್.ಟಿ. ಕುಮಾರ್ 9964481065, ತೋಳೂರುಶೆಟ್ಟಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು ಮತ್ತು ಕೂತಿ ಗ್ರಾಮಗಳಿಗೆ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ 9972713465, ಶಾಂತಳ್ಳಿ ಗ್ರಾ.ಪಂ.ಯ ಶಾಂತಳ್ಳಿ, ಅಬ್ಬಿಮಠ, ತಲ್ತರೆಶೆಟ್ಟಳ್ಳಿ ಮತ್ತು ಹರಗ ಗ್ರಾಮಗಳಿಗೆ ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಖಾರಿ ಸುನಿಲ್ 9480869105, ಗೌಡಳ್ಳಿ ಗ್ರಾ.ಪಂ.ಯ ಗೌಡಳ್ಳಿ, ಶುಂಠಿ, ಚೆನ್ನಾಪುರ, ಹೆಗ್ಗುಲ ಮತ್ತು ನಂದಿಗುಂದ ಗ್ರಾಮಗಳಿಗೆ ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್ 9741511562.

ಐಗೂರು ಗ್ರಾ.ಪಂ.ಯ ಐಗೂರು, ಯಡವನಾಡು ಅರಣ್ಯ 1ನೇ ಬಿಟ್, ಯಡವನಾಡು ಅರಣ್ಯ 2ನೇ ಬಿಟ್‍ಗಳಿಗೆ ಮತ್ತು ಬೇಳೂರು ಗ್ರಾ.ಪಂ.ಯ ಬೇಳೂರು ಬಸವನಹಳ್ಳಿ, ಬಳಗುಂದ, ಕುಸುಬೂರು ಮತ್ತು ಗಡಿನಾಡು ಅರಣ್ಯಗಳಿಗೆ ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್ 9845985461, 8277931907, ಗುಡ್ಡೆಹೊಸೂರು ಗ್ರಾ.ಪಂ.ಯ ಬಸವನಹಳ್ಳಿ, ರಸಲ್‍ಪುರ, ಅತ್ತೂರು ಅರಣ್ಯ, ಆನೆಕಾಡು ಅರಣ್ಯ ಮತ್ತು ಬೈಚನಹಳ್ಳಿ ಗ್ರಾಮಗಳಿಗೆ ಕುಶಾಲನಗರದ ಹುಲುಗುಂದ ಉಪವಿಭಾಗದ ನಂ. 3 ಕ್ವಾಲಿಟಿ ಕಂಟ್ರೋಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ಕುಮಾರ್ ಪಿ.ಆರ್. 9449679751, ಕೆದಕಲ್ ನೇಗದಾಳ್, ಕಂಬಿಬಾಣೆಯ ಅತ್ತೂರು-ನಲ್ಲೂರು, ಅಂದಗೋವೆಯ ಕೊಡಗರಹಳ್ಳಿ ಗ್ರಾಮಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ) ಹೆಚ್.ಕೆ. ಪಾಂಡು 9480835587, 9448390766, ಹಾನಗಲ್ಲು ಗ್ರಾ.ಪಂ.ಯ ಹಾನಗಲ್ಲು, ಯಡೂರು ಮತ್ತು ಕಲ್ಕಂದೂರು, ಚೌಡ್ಲು, ಸೋಮವಾರಪೇಟೆ ನಗರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ 9964140613.

ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳಾದೇವಿ ನಗರ ಅಜಾದ್ ನಗರ, ಭಗವತಿ ನಗರ ಮತ್ತು ಪುಟಾಣಿ ನಗರಗಳಿಗೆ ನಗರಸಭೆ ಪೌರಾಯುಕ್ತ ರಮೇಶ್ 9449979262 ಹಾಗೂ ವೀರಾಜಪೇಟೆ ನಗರಕ್ಕೆ ವೀರಾಜಪೇಟೆ ಪ.ಪಂ. ಮುಖ್ಯಾಧಿಕಾರಿ 9449979262.

ನೋಡಲ್ ಅಧಿಕಾರಿಯಾಗಿ ನೇಮಿಸಿದ ಅಧಿಕಾರಿಗಳು ತಮಗೆ ವಹಿಸಿದ ಗ್ರಾಮ, ಗ್ರಾ.ಪಂ.ಗಳಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಗೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಹಾಗೂ ತುರ್ತು ಕೆಲಸಗಳು ಆಗಬೇಕಾದಲ್ಲಿ ಛಾಯಾಚಿತ್ರದೊಂದಿಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲು ಕ್ರಮ ಕೈಗೊಳ್ಳತ್ತಕ್ಕದ್ದು, ಅಲ್ಲದೆ ಪ್ರಕೃತಿ ವಿಕೋಪದ ಸಂದರ್ಭ ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.