ವೀರಾಜಪೇಟೆ, ಮೇ 14: ವೀರಾಜಪೇಟೆಯಲ್ಲಿರುವ ಜೇನು ಮತ್ತು ಮೇಣ ಸಹಕಾರದಿಂದ 52 ಸಂತ್ರಸ್ತ ಕುಟುಂಬಗಳಿಗೆ 102 ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಉತ್ತರ ಕೊಡಗಿನಲ್ಲಿ ಉಂಟಾದ ಭೀಕರ ಪ್ರಕೃತಿ ವಿಕೋಪದಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದವು. ಇದನ್ನು ಗಮನಿಸಿದ ಸಹಕಾರ ಸಂಘ ಸಂತ್ರಸ್ತರಿಗೆ ಜೇನು ಪೆಟ್ಟಿಗೆಗಳನ್ನು ವಿತರಿಸಿದೆ.