ಮಡಿಕೇರಿ, ಮೇ 14: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾಟದ ಇಂದು ನಡೆದ ಪಂದ್ಯಾಟದಲ್ಲಿ ಕಾಂಗೀರ, ಕೊಂಪುಳೀರ (ಬಿ), ಎಡಿಕೇರಿ, ಮರದಾಳು, ಪಾಣತ್ತಲೆ (ಬಿ) ಕಲ್ಲುಮುಟ್ಲು ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾಟದಲ್ಲಿ ಪಾಣತ್ತಲೆ ‘ಬಿ’ ತಂಡ ಭರ್ಜರಿ ಆಟ ಪ್ರದರ್ಶನ ಮಾಡಿದೆ. ಪಟ್ಟೆಮನೆ ತಂಡದ ಎದುರು 15-10 ಗೋಲುಗಳ ಭಾರೀ ಅಂತರದಿಂದ ಗೆಲವು ಸಾಧಿಸಿದೆ. ಪಾಣತ್ತಲೆ ಜಗದೀಶ್ ಹ್ಯಾಟ್ರಿಕ್ ಸಾಧನೆಯೊಂದಿಗೆ ವೈಯಕ್ತಿಕ 10 ಗೋಲು ಬಾರಿಸಿ ಗಮನ ಸೆಳೆದರು.

ಉಳುವಾರನ ತಂಡ 3-0 ಗೋಲುಗಳಿಂದ ಜೈನಿರ ತಂಡವನ್ನು, ಕೊಂಪುಳಿರ ತಂಡ ಚೋಂಡಿರ ತಂಡವನ್ನು 6-0 ಗೋಲಿನಿಂದ, ಎಡಿಕೇರಿ ತಂಡ ಪಾಣತ್ತಲೆ ಎ ತಂಡವನ್ನು 3-0 ಗೋಲಿನಿಂದ ಸೋಲಿಸಿತು.

ಮತ್ತೊಂದು ಸುತ್ತಿನ ಪಂದ್ಯಾಟದಲ್ಲಿ ಕೊಂಪುಳಿರ ತಂಡ ಕಾನಡ್ಕ ತಂಡವನ್ನು 5-0

ಗೋಲುಗಳಿಂದ ಜೈನಿರ ತಂಡವನ್ನು, ಕೊಂಪುಳಿರ ತಂಡ ಚೋಂಡಿರ ತಂಡವನ್ನು 6-0 ಗೋಲಿನಿಂದ, ಎಡಿಕೇರಿ ತಂಡ ಪಾಣತ್ತಲೆ ಎ ತಂಡವನ್ನು 3-0 ಗೋಲಿನಿಂದ ಸೋಲಿಸಿತು.

ಮತ್ತೊಂದು ಸುತ್ತಿನ ಪಂದ್ಯಾಟದಲ್ಲಿ ಕೊಂಪುಳಿರ ತಂಡ ಕಾನಡ್ಕ ತಂಡವನ್ನು 5-0 ಕಂಡು ಟೈ ಬ್ರೇಕರ್‍ನಲ್ಲಿ 4-1 ಗೋಲುಗಳಿಂದ ಮರದಾಳು ಗೆಲವು ಸಾಧಿಸಿತು.

ತಾ. 15 ರಂದು (ಇಂದು) ಎಡಿಕೇರಿ, ಮುಕ್ಕಾಟಿ, ಕಲ್ಲುಮುಟ್ಲು, ಮರದಾಳು, ನಂಗಾರು, ಕೊಳಂಬೆ, ಮೇರ್‍ಕಜೆ, ಪರಿಚನ, ತೂಟೇರ, ಚಂಡೀರ ಹಾಗೂ ಎರಡನೇ ಹಂತದ ಪಂದ್ಯಗಳು ನಡೆಯಲಿವೆ.