ಮಡಿಕೇರಿ, ಮೇ 14: ಕೊಡವ ಮಕ್ಕಡ ಕೂಟದ 7 ವರ್ಷದ ಆಟ್ ಪಾಟ್ ಸಮಾರೋಪ ಸಮಾರಂಭ ತಾ. 17 ರಂದು ಮಧ್ಯಾಹ್ನ 2.30ಕ್ಕೆ ನಾಪೋಕ್ಲು ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಪುತ್ತರಿರಕರುಣ್ ಕಾಳಯ್ಯ ಪ್ರಕಟಣೆಯಲ್ಲಿ ತಿಳಿದ್ದಾರೆ. ಅತಿಥಿಗಳಾಗಿ ಭಾಗಮಂಡಲ ಹಾಗೂ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಉದ್ಯಮಿ ಹಾಗೂ ಹಾಕಿ ಕರ್ನಾಟದ ಉಪಾಧ್ಯಕ್ಷ ಅರೆಯಡ ಪವಿನ್ ಪೊನ್ನಣ್ಣ ಮತ್ತಿತರರು ಭಾಗವಹಿಸುವರು.