ಮಡಿಕೇರಿ, ಮೇ 13: ಮೈಸೂರು ಸಂಸ್ಥಾನದ ಗೌರವ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಉಪಸ್ಥಿತಿಯಲ್ಲಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2018-19 ಸಾಲಿನ, ‘ಸುವರ್ಣ ಶ್ರೀ’ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಮತ್ತು ಸುವರ್ಣ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆದ ಸಮಾರಂಭದಲ್ಲಿ ವೀರಾಜಪೇಟೆಯ ಆಯುಷ್. ಎಂ.ಡಿ. ಅವರನ್ನು ಗಾಯನ ಕಲೆ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈತ ಕಾಪ್ಸ್ ಶಾಲೆಯ ವಿದ್ಯಾರ್ಥಿ.