ವೀರಾಜಪೇಟೆ, ಮೇ 12: ವಿವಿಧತೆಯಲ್ಲಿ ಏಕತೆ ಕಂಡ ದೇಶ ನಮ್ಮದು, ಕ್ರೀಡೆಯು ಒಂದು ಜಾತಿ ಧರ್ಮಕ್ಕೆ ಸಿಮೀತವಾಗದೆ ಎಲ್ಲಾ ಧರ್ಮಗಳನ್ನು ಒಂದೇ ಸೂರಿನಡಿಯಲ್ಲಿ ಕೇಂದ್ರೀಕರಿಸುವ ಶಕ್ತಿ ಕ್ರೀಡೆಗೆ ಮಾತ್ರ ಸಾಧ್ಯ ಎಂದು ವೀರಾಜಪೇಟೆ ವಿಧಾನಸಭಾ ಕೇತ್ರದ ಶಾಸಕ ಕೆ.ಜಿ. ಬೊಪ್ಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಹಿಂದೂ ಮಲೆಯಾಳಿ ಅಸೋಸಿಯೇಶನ್ ವೀರಾಜಪೇಟೆ ಶಾಖೆಯ ವತಿಯಿಂದ ಪ್ರಥಮ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತÀ ಕಾಲ್ಚೆಂಡು ಪಂದ್ಯಾಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೆ.ಜಿ ಬೊಪಯ್ಯ, ಕೊಡಗು ಕ್ರೀಡೆಗಳಿಗೆ ಹೆಸರುವಾಸಿ. ಕೌಟುಂಬಿಕ ಹಾಕಿ ಕ್ರೀಡೆಯು ಆಯೋಜನೆಯಿಂದ ಪ್ರೇರೆಪಣೆಗೊಂಡು ಎಲ್ಲಾ ಧರ್ಮದವರು ತಮ್ಮ ಸಮುದಾಯವನ್ನು ಒಂದುಗೂಡಿಸುವ ಸಲುವಾಗಿ ವಿವಿಧ ಕ್ರೀಡೆಗಳನ್ನು ಅಯೋಜಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಮಾತನಾಡಿ, ಕೊಡಗು ಜಿಲ್ಲೆಯು ಹಾಕಿಯ ತವರೂರು; ಅದೇ ರೀತಿಯಲ್ಲಿ ಇತ್ತೀಚಿನ ವರ್ಷದಲ್ಲಿ ಕಾಲ್ಚೆಂಡು ಪಂದ್ಯಾಟಕ್ಕೆ ಪ್ರೋತ್ಸಾಹ ನೀಡುತ್ತಿರುವದು ಸಂತೋಷವಾದ ಬೆಳವಣಿಗೆಯಾಗಿದೆ ಎಂದರು.

ಹಿಂದೂ ಮಲೆಯಾಳಿ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಸಮಾಜದ ಬೆಳವಣಿಗೆ ಮತ್ತು ಏಳಿಗೆಯು ಸಂಸ್ಕøತಿಯನ್ನು ಜೀವಂತವಾಗಿರಿಸಿ ಮುಂದಿನ ಪೀಳಿಗೆಗೆ ಧಾರೆಯೆರೆ ಯುವದಾಗಿದೆ ಎಂದು ಶ್ಲಾಘನೀಯ ಮಾತುಗಳನ್ನಾಡಿದರು.

ಕೊಡಗು ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಎಂ.ಪಿ. ಸುಜಾ ಕುಶಾಲಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕೊಡಗು ಹಿಂದೂ ಮಲೆಯಾಳಿ ಅಸೋಸಿಯೇಶನ್ ಅಧ್ಯಕ್ಷ ಕೆ.ಬಿ. ಹರ್ಷವರ್ಧನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿವೃತ್ತ ಅಧಿಕಾರಿ ವಿನೋದ್ ಥರ್ಮಲ್, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಮುತ್ತಪ್ಪ ದೇವಾಸ್ಥಾನದ ಅಧ್ಯಕ್ಷ ಇ.ಸಿ. ಜೀವನ್, ವಕೀಲ ಟಿ.ಪಿ ಕೃಷ್ಣ, ಭಾ.ಜ.ಪ. ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಉದ್ಯಮಿ ಎ. ವಿನೋಪ್ ಕುಮಾರ್, ಎನ್.ಆರ್. ರಾಜ, ಜನೀಶ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಲೇಖಕ ವಿನೋದ್ ಮತ್ತು ಡಾ. ಅಕ್ಷಯ ಪ್ರಥ್ವಿನಾಥ್ ಅವರುಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ವಿಭಾಗಗಳಲ್ಲಿ ಹೆಚ್ಚು ಅಂಕಗಳಿಸಿದ 12 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟ ನಗರ ಸೇರಿದಂತೆ ಜಿಲ್ಲೆ ಹಾಗೂ ಕೇರಳ ರಾಜ್ಯದ ಒಟ್ಟು 32 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಓಂ ಫ್ರೆಂಡ್ಸ್ ಅರಸುನಗರ ತಂಡ ಮತ್ತು ರೋಜರ್ ಎಫ್.ಸಿ. ಪಾಲಿಬೆಟ್ಟ ತಂಡಗಳ ಮಧ್ಯೆ ನಡೆದು ಓಂ ಫ್ರೆಂಡ್ಸ್ ತಂಡವು 3-0 ಗೋಲುಗಳಿಂದ ವಿಜಯಶಾಲಿಯಾಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ ಪರಿತೋಷಕ ಮತ್ತು ನಗದು, ದ್ವಿತೀಯ ಸ್ಥಾನಗಳಿಸಿದ ತಂಡಕ್ಕೆ ಪರಿತೋಷಕ ಮತ್ತು ನಗದು ನೀಡಿ ಗೌರವಿಸಲಾಯಿತು.