ಸೋಮವಾರಪೇಟೆ, ಮೇ 12: ಯಾವದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಅರಸಿಕಟ್ಟೆ ನಿವಾಸಿಗಳಾದ ಪಾಪಣ್ಣ, ಶಂಕರೇಗೌಡ, ಯಲಕನೂರು ಗ್ರಾಮದ ಕಾಳಪ್ಪ ಬಂಧಿತರು.
ನೇಗಳ್ಳೆ ಗ್ರಾಮದಿಂದ ಎರಡು ಜಾನುವಾರುಗಳನ್ನು ಅರಕಲಗೂಡಿಗೆ ವಾಹನದಲ್ಲಿ ಸಾಗಿಸುವ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.