ಶನಿವಾರಸಂತೆ, ಮೇ 12: ಗೋಪಾಲಪುರ ಕೂಡುರಸ್ತೆ ಜಂಕ್ಷನ್‍ನಲ್ಲಿ ಒಡೆಯನಪುರ ಗ್ರಾಮದ ನಿವಾಸಿಗಳಾದ ಈರ್ವರು ತಮ್ಮ ಸ್ಕೂಟರ್ (ಕೆ.ಎ. 12 ಆರ್. 0770) ಅನ್ನು ನಿಲ್ಲಿಸಿಕೊಂಡು ಮಾತನಾಡಿಕೊಂಡಿರುವಾಗ ನಂದಿಗುಂದ ಗ್ರಾಮದ ನಿವಾಸಿ ತಮ್ಮ ಮೋಟಾರ್ ಸೈಕಲ್ (ಕೆ.ಎ. 13 ಆರ್. 8727) ಅನ್ನು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿಪಡಿಸಲಾಗಿ ಚಂದ್ರಶೇಖರ್ ಅವರ ಎರಡು ಕೈಗಳಿಗೆ ಗಾಯವಾಗಿದೆ. ಯಶವಂತ ಅವರ ಹಣೆ ಮತ್ತು ತಲೆಗೆ ಗಾಯವಾಗಿದೆ.

ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಯಶವಂತ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಪಾಲಪುರ ಗ್ರಾಮದ ಜಿ.ಆರ್. ಧರ್ಮಪಾಲ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.