ಮಡಿಕೇರಿ, ಮೇ 13 : ಮೈಸೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಮಹಿಳಾ ಸಮಾಜದ ವತಿಯಿಂದ ಮಳೆಹಾನಿ ಸಂತ್ರಸ್ತರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.

ನಗರದ ಟ್ರೈಕಲರ್ ಅಕಾಡೆಮಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಐದು ಸಂತ್ರಸ್ತ ಕುಟುಂಬಗಳಿಗೆ ತಲಾ ರೂ. 5 ಸಾವಿರದಂತೆ ಒಟ್ಟು ಇಪ್ಪತ್ತೈದು ಸಾವಿರವನ್ನು ಚೆಕ್ ರೂಪದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭ ಸಮಾಜದ ಅಧ್ಯಕ್ಷೆ ದೇವಜನ ಗೀತಾ ಮೊಂಟಡ್ಕ, ಗೌರವಾಧ್ಯಕ್ಷೆ ಉಳುವಾರನ ಘನಾವತಿ, ಖಜಾಂಚಿ ನಡುವಟ್ಡಿರ ಗೀತಾ ಲಕ್ಷ್ಮಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೋಳಿಮಾಡ ಅನುರಾಧ, ಕರ್ಣಯ್ಯನ ಸಬಿತ ಹಾಗೂ ಟ್ರೈಕಲರ್ ಅಕಾಡೆಮಿಯ ಮುಖ್ಯಸ್ಥೆ ಮೋಕ್ಷಿತ ಪಟೇಲ್ ಹಾಜರಿದ್ದರು.