ಸಿದ್ದಾಪುರ, ಮೇ 12: ಕಾಡಾನೆ ದಾಳಿಯಿಂದ ತತ್ತರಿಸಿರುವ ಗುಹ್ಯ ಗ್ರಾಮದಲ್ಲಿ ಇದೀಗ ಕಾಡು ಕೋಣ ಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟು ಮಾಡಿದೆ.ಗುಹ್ಯ ಗ್ರಾಮದ ಪಳನಿ ಎಸ್ಟೇಟ್, ಏಂಜಲ್ ಫೀಲ್ಡ್ ಎಸ್ಟೇಟ್ ನಲ್ಲಿ ಕಾಡು ಕೋಣಗಳು ಬೀಡು ಬಿಟ್ಟಿದ್ದು, ತೋಟದ ಕಾರ್ಮಿಕರು ಕೆಲಸ ಮಾಡುವ ವೇಳೆ ಕಾಡು ಕೋಣಗಳ ಹಿಂಡನ್ನು ಕಂಡಿದ್ದು, ಭಯಬೀತ ರಾಗಿದ್ದಾರೆ. ಇತ್ತ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳು ವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.