ಸಿದ್ದಾಪುರ, ಮೇ 12: ಸಮಸ್ತ ಕರ್ನಾಟಕ ಸುನ್ನಿ ಸ್ಟುಡೆಂಟ್ ಫೆಡರೇಷನ್ ಸಂಘಟನೆ ಸಿದ್ದಾಪುರ ಶಾಖೆಯಿಂದ ಸಿದ್ದಾಪುರ ಮುಸ್ಲಿಂ ಅನಾಥಾಶ್ರಮದ ವಿದ್ಯಾರ್ಥಿ ನಿಲಯಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುನನ್ವಿರುಲ್ ಇಸ್ಲಾಂ ಮದರಸ ಆವರಣದಲ್ಲಿ ಕೊಳವೆ ಬಾವಿಯನ್ನು ಕೊರೆಸುವ ಕಾರ್ಯಕ್ಕೆ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ ಚಾಲನೆ ನೀಡಿದರು
ಎಸ್ಕೆ ಎಸ್ಎಸ್ಎಫ್ ಜಿಲ್ಲಾ ಸಮಿತಿ ಕಾರ್ಯದರ್ಶಿ ತಮ್ಲಿಕ್ ದಾರಿಮಿ, ಪ್ರಮುಖರಾದ ಉಮ್ಮರ್ ಫೈಝಿ, ರವೂಫ್ ಹಾಜಿ, ನೌಫಲ್ ಉದವಿ, ಆರಿಫ್ ಫೈಝಿ, ನವಾಜ್, ಸಮೀರ್, ನಜೀರ್, ಅಲವಿ ಮೌಲವಿ, ಸಿಯಾಬ್, ಸರ್ಫುದೀನ್, ಗ್ರಾಮ ಪಂಚಾಯಿತಿ ಸದಸ್ಯ ವಿ.ಕೆ. ಜಾಫರ್ ಮತ್ತಿತರರು ಹಾಜರಿದ್ದರು.