ಮಡಿಕೇರಿ, ಮೇ 12: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಜಿಲ್ಲಾ ಅಪರಾಧ ಪತ್ತೆದಳ ಇಬ್ಬರನ್ನು ಬಂಧಿಸಿದೆ.
ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೇತ್ರಿ ಕಾವೇರಿ ಹೊಳೆಯಿಂದ ಮೂರ್ನಾಡಿಗೆ ಲಾರಿ (ಕೆಎ 12 ಎ 3405)ಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಹೆಮ್ಮಾಡು ರಸ್ತೆಯಲ್ಲಿ ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಲಾರಿ ಮಾಲೀಕ ತಮ್ಮಯ್ಯ ಹಾಗೂ ಚಾಲಕ ಸ್ವಾಮಿ ಎಂಬವರನ್ನು ಬಂಧಿಸಲಾಗಿದೆ.
ಎಸ್ಪಿ ಸುಮನ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಸಹಾಯಕ ಠಾಣಾಧಿಕಾರಿ ಹಮೀದ್, ಸಿಬ್ಬಂದಿಗಳಾದ ವೆಂಕಟೇಶ್, ಅನಿಲ್, ನಿರಂಜನ್, ವಸಂತ, ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಬೋಪಣ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.