ಸೋಮವಾರಪೇಟೆ, ಮೇ 11: ಇಲ್ಲಿನ ಬ್ರಾಹ್ಮಣ ಸಮಾಜದ ವತಿಯಿಂದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು.
ಮೈಸೂರಿನ ಉಪನ್ಯಾಸಕ ಎನ್. ನಾಗೇಂದ್ರ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಶಂಕರಾಚಾರ್ಯ ಅವರ ಬಾಲ್ಯ, ದೀಕ್ಷೆ, ಸನ್ಯಾಸತ್ವ, ಆಧ್ಯಾತ್ಮಿಕ ಬದುಕಿನ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಶೃಂಗೇರಿ ದೇವಾಲಯದ ಶಂಕರ ತತ್ವ ಪ್ರಚಾರಕರಾದ ಸುರೇಶ್ ಋಗ್ವೇದಿ, ಬ್ರಾಹ್ಮಣ ಸಮಾಜದ ಸದಸ್ಯ ಕೆ.ಎನ್. ರಮೇಶ್, ದೇವಾಲಯ ಸಮಿತಿ ಮಾಜೀ ಅಧ್ಯಕ್ಷ ಸೋಮೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಎಸ್.ಎನ್. ಶೇಷಾದ್ರಿ, ಪ್ರಾಂಶುಪಾಲ ಶ್ರೀಧರ್, ದೇವಿ ಬಳಗದ ಮಾಜಿ ಅಧ್ಯಕ್ಷೆ ಪಂಕಜ ಶ್ಯಾಂಸುಂದರ್, ರವಿಶಂಕರ್ ಉಪಸ್ಥಿತರಿದ್ದರು.