ನಾಪೆÇೀಕ್ಲು, ಮೇ 11: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕಕ್ಕಬೆಯಲ್ಲಿ ನಡೆಸಲಾಗುತ್ತಿರುವ 2019 ಮತ್ತು 20ನೇ ಸಾಲಿನ 1 ರಿಂದ 5ನೇ ತರಗತಿಗಳಿಗೆ ದಾಖಲಾತಿ ಆರಂಭಗೊಂಡಿದೆ.

ಪರಿಶಿಷ್ಟ ಜಾತಿಗೆ ಶೇ. 75 ಮತ್ತು ಪರಿಶಿಷ್ಟ ಪಂಗಡ, ಮತ್ತಿತರರಿಗೆ ಶೇ. 25 ಅವಕಾಶವಿದ್ದು, ಉಚಿತ ಸಮವಸ್ತ್ರ, ಬ್ಯಾಗ್, ಶುಲ್ಕ ರಹಿತ ದಾಖಲಾತಿ, ಲೇಖನ ಸಾಮಗ್ರಿ, ಹಾಸ್ಟೆಲ್ ವ್ಯವಸ್ಥೆ, ಪೌಷ್ಟಿಕ ಆಹಾರ, ಶುಚಿ ಸಂಭ್ರಮ ಕಿಟ್, ಆರೋಗ್ಯ ತಪಾಸಣೆ ಎಲ್ಲವೂ ಉಚಿತವಾಗಿರುತ್ತದೆ. ಆಸಕ್ತರು ಜಿಲ್ಲಾ ಸಮಾಜ ಕಲ್ಯಾಣ ಇಲಾಖಾ ಕಚೇರಿ ಅಥವಾ ಕಕ್ಕಬೆ ವಸತಿ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಕೋರಲಾಗಿದೆ. ದೂ. ಸಂಖ್ಯೆ: 08272-223552, 08272-238600.