ಗೋಣಿಕೊಪ್ಪ ವರದಿ, ಮೇ 11 ; ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿರುವ ಒಕ್ಕಲಿಗ ಜನಾಂಗಗಳ 3 ನೇ ವರ್ಷದ ಕ್ರಿಕೆಟ್ ಟೂರ್ನಿಯಲ್ಲಿ ಕೋಟೆಕೊಪ್ಪ .ಎ. ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದೆ.
ಶನಿವಾರ ನಡೆದ ಕ್ರೀಡಾಕೂಟದ ಮೊದಲನೇ ದಿನದ ಪಂದ್ಯಾವಳಿಯಲ್ಲಿ ಕೈಕೇರಿ ಎ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಕೈಕೇರಿ ನೀಡಿದ್ದ 46 ರನ್ಗಳ ಗುರಿ ಬೆನ್ನಟ್ಟಿದ ಕೋಟೆಕೊಪ್ಪ 3 ವಿಕೆಟ್ ಕಳೆದುಕೊಂಡು 7 ವಿಕೆಟ್ಗಳ ಗೆಲವು ಸಾಧಿಸಿತು.
ಉಳಿದ ಪಂದ್ಯಗಳಲ್ಲಿ ರಾಯಲ್ ಟೈಗರ್ಸ್, ವಿನಾಯಕ ನಗರ ಎ, ಕೋಟೆಕೊಪ್ಪ ಸಿ, ತಾಕೇರಿ ಗೌಡಾಸ್, ಕೈಕೇರಿ ಎ, ಕೋತೂರು ಬಿ, ಮೈತಾಡಿ ಎ. ತಂಡಗಳು ಜಯ ಗಳಿಸಿದವು.
ರಾಯಲ್ ಟೈಗರ್ಸ್ ತಂಡವು ತಿತಿಮತಿ ಗೌಡಾಸ್ ವಿರುದ್ದ ಜಯ ಪಡೆಯಿತು. ವಿನಾಯಕ ನಗರ ಎ ತಂಡವು ಕೋಟೆಕೊಪ್ಪ ಬಿ ತಂಡದ ವಿರುದ್ದ 6 ವಿಕೆಟ್ ಗೆಲವು ಪಡೆಯಿತು. ಕೋಟೆಕೊಪ್ಪ ಸಿ ತಂಡವು ಕೈಕೇರಿ ಬಿ ವಿರುದ್ದ ಜಯ ಪಡೆಯಿತು. ತಾಕೇರಿ ಗೌಡಾಸ್ ತಂಡವು ಕೋತೂರು ಎ ವಿರುದ್ದ ಜಯಿಸಿತು. ಕೈಕೇರಿ ಎ ತಂಡವು ಮೈತಾಡಿ ತಂಡವನ್ನು ಮಣಿಸಿತು. ಕೋತೂರು ಬಿ. ತಂಡವು ಕೋಟೆಕೊಪ್ಪ ಸಿ ವಿರುದ್ದ ಜಯ ಸಾಧಿಸಿತು. ಮೈತಾಡಿ ಎ ತಂಡವು ತಿತಿಮತಿ ವಿರುದ್ದ ಗೆಲವು ಪಡೆಯಿತು.
ಉದ್ಘಾಟನೆ
ಕ್ರೀಡಾಕೂಟವನ್ನು ದಾನಿ ವಿ.ಕೆ. ದಿನೇಶ್ ಉದ್ಘಾಟಿಸಿದರು. ಈ ಸಂದರ್ಭ ದಾನಿ ವಿ.ಇ. ರಮೇಶ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಎನ್. ಮಹೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರ. ಕಾರ್ಯದರ್ಶಿ ಲೋಹಿತ್ ಗೌಡ, ಹಾತೂರು ವಿಎಸ್ ಎಸ್ ಎನ್ ನಿರ್ದೇಶಕ ಎಚ್. ಡಿ. ಶ್ರೀನಿವಾಸ್, ಸ್ಥಳೀಯ ಹಿರಿಯರಾದ ವಿ. ಸಿ. ಪದ್ಮ ಉಪಸ್ಥಿತರಿದ್ದರು.
ಸಮಾರೋಪ
ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭ ಮಹಿಳೆಯರಿಗೆ ಹಗ್ಗಜಗ್ಗಾಟ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿದೆ.