ಮಡಿಕೇರಿ, ಮೇ 10 : ವೀರಾಜಪೇಟೆ ತಾಲೂಕಿನ ಅರಪಟ್ಟು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಹಿಳೆಯೊಬ್ಬರ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆ ನೀಡಬೇಕೆಂದು ಗ್ರಾಮದ ವಿವಿಧ ಮಹಿಳಾ ಸಂಘÀಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಹಿಳಾ ಸಮಾಜದ ಸದಸ್ಯೆ ಟಿ.ಸುಕುಮಾರಿ ಹಾಗೂ ಇತರರು, ಬೇಡಿಕೆಗೆ ಸೂಕ್ತ ಸ್ಪಂದನ ನೀಡಿ, ಅಗತ್ಯ ಕ್ರಮಕ್ಕೆ ಮುಂದಾಗದಿದ್ದಲ್ಲಿ ಶೀಘ್ರವೇ ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳಾ ಸಂಘಟನೆಗಳು ಒಗ್ಗೂಡಿ ಪ್ರತಿಭಟನೆಗೆ ಇಳಿಯುವದಾಗಿ ಎಚ್ಚರಿಕೆ ನೀಡಿದ್ದಾರೆ.

ಅರಪಟ್ಟು ಗ್ರಾಮದ ನಾರಾಯಣ ಸ್ವಾಮಿ ಮತ್ತು ಸರೋಜಾ ದೇವಿ ಅವರ ಪುತ್ರ ಹರೀಶ್ ಕುಮಾರ್ ಅವರ ಪತ್ನಿ ಪ್ರಮೀಳಾ (24) ಎಂಬಾಕೆ ತಾ. 18 ರಂದು ಮಧ್ಯಾಹ್ನ ಸಂಶಯಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಲ್ಲ ಎಂಬದು ಗೋಚರಿಸುತ್ತಿದ್ದರೂ, ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಆತ್ಮಹತ್ಯೆಯೆಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಮೀಳಾ ಮುಗ್ದೆಯಾಗಿದ್ದು, ಆತ್ಮಹತ್ಯೆಗೆ ಮುಂದಾಗುವವಳಲ್ಲ. ಹರೀಶ್‍ಕುಮಾರ್ ಎರಡನೇ ವಿವಾಹವಾಗಿದ್ದು, ಈ ಹಿಂದೆ ಜೈಲುವಾಸವನ್ನು ಅನುಭವಿಸಿದ್ದ ವ್ಯಕ್ತಿಯಾಗಿದ್ದಾನೆ. ಪ್ರಮೀಳಾ ಸಾವಿನ ಹಿಂದೆ ಹರೀಶ್‍ಕುಮಾರ್ ಹಾಗೂ ಆತನ ಕುಟುಂಬಸ್ಥರ ಕೈವಾಡವಿರುವ ಸಂಶಯವಿದೆ. ಈ ಬಗ್ಗೆ ಮಹಿಳಾ ಸಂಘಟನೆಗಳು ವೀರಾಜಪೇಟೆ ಗ್ರಾಮಾಂತರ ಪೊಲೀಸರ ಗಮನ ಸೆಳೆÉದಿದ್ದರೂ, ಸೂಕ್ತ ತನಿಖೆÉ ನಡೆಸುವ ಬದಲು ಮಹಿಳಾ ಸಂಘಟನೆಗಳ ಸದಸ್ಯರುಗಳನ್ನೆ ಬೆದರಿಸುವ ಪ್ರಯತ್ನಗಳಿಗೆ ಮುಂದಾಗಿದ್ದಾರೆ ಎಂದು ದೂರಿದರು.

ಪ್ರಕರಣದ ತನಿಖೆÉಗೆ ಒತ್ತಾಯಿಸಿದ ಮಹಿಳಾ ಸಂಘಟನೆಗಳ ಸದಸ್ಯರುಗಳ ಮನೆಗಳಿಗೆ ರಾತ್ರೋರಾತ್ರಿ ಪೊಲೀಸ್ ಸಿಬ್ಬಂದಿಗಳನ್ನು ಕಳುಹಿಸಿ ಠಾಣೆಗೆ ಬರುವಂತೆ ಕಿರುಕುಳ ನೀಡುವದರೊಂದಿಗೆ ಠಾಣೆಯಲ್ಲಿ ಹೇಳಿಕೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ಪೊಲೀಸರು ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಹುನ್ನಾರ ನಡೆಸಿರುವ ಸಂಶಯವಿದೆ ಎಂದು ಆರೋಪಿಸಿದ ಅವರುಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹರೀಶ್ ಕುಮಾರ್ ಸೇರಿದಂತೆ ಆತನ ಕುಟುಂಬದ ಸದಸ್ಯರನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತೆ ಪ್ರಮೀಳಾ ಅವರ ಸಹೋದರಿ ಪ್ರೇಮಾ, ಮಹಿಳಾ ಸಂಘಟನೆಗಳ ಸದಸ್ಯರುಗಳಾದ ಜಾನಕಿ, ಸುಮಿತ್ರಾ ಹಾಗೂ ನೇತ್ರ ಉಪಸ್ಥಿತರಿದ್ದರು.