ಮಡಿಕೇರಿ, ಮೇ 9: ಜಿಲ್ಲಾಡಳಿತ ವತಿಯಿಂದ ಶಂಕರಾಚಾರ್ಯ ಮತ್ತು ವರ್ಧಮಾನ್ ಮಹಾವೀರ ಜಯಂತಿ ಯನ್ನು ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ ಅವರು ಶಂಕರಾಚಾರ್ಯ ಮತ್ತು ವರ್ಧಮಾನ್ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಶಂಕರಾಚಾರ್ಯ ಮತ್ತು ವರ್ಧಮಾನ್ ಮಹಾವೀರ ಮಹಾನ್ ಯೋಗಿಗಳಾಗಿದ್ದು, ಮಾನವೀಯ ಮೌಲ್ಯ ಹಾಗೂ ಆದರ್ಶ ಜೀವನವನ್ನು ಇಡೀ ಜಗತ್ತಿಗೆ ಪ್ರತಿಪಾದಿಸಿದರು ಎಂದರು. ಕಾರ್ಯಕ್ರಮದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮ ಸೇನ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ್, ನಗರಸಭೆಯ ಆಯುಕ್ತರಾದ ರಮೇಶ್ ಇತರರು ಇದ್ದರು.