ಶನಿವಾರಸಂತೆ, ಮೇ 10: ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಆದೇಶದ ಅನ್ವಯ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆ ನಡೆಯಿತು. ಜಿಲ್ಲೆಯ ಚುನಾವಣಾಧಿಕಾರಿ ನಂಜಪ್ಪ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ತಾಲೂಕು ಘಟಕದ ಅಧ್ಯಕ್ಷರಾಗಿ ಕೆ.ಬಿ. ಹಾಲಪ್ಪ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ 3 ಸ್ಥಾನಗಳಿಗೆ ತೊರೆನೂರಿನ ಹೆಚ್.ಬಿ. ಚಂದ್ರಪ್ಪ, ಗೆಜ್ಜೆಹಣಕೋಡು ಗ್ರಾಮದ ಡಿ.ಜೆ. ರಶ್ಮಿ, ಬಡುಬನಹಳ್ಳಿ ಗ್ರಾಮದ ಸರಳಾಕ್ಷಿ ಬಸಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ ಸಂತೆಯ ಸಿ.ಎಂ. ಪುಟ್ಟಸ್ವಾಮಿ, 3 ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲನಗರದ ಸೌಭಾಗ್ಯ, ಅಡಿನಾಡೂರಿನ ವಿರೂಪಾಕ್ಷ, ಹಂಡ್ಲಿ ಗ್ರಾಮದ ವೀರೇಂದ್ರ ಕುಮಾರ್, ಖಜಾಂಚಿಯಾಗಿ ಕೊಡ್ಲಿಪೇಟೆಯ ಸಿ.ವಿ. ಶಂಭುಲಿಂಗಪ್ಪ ಹಾಗೂ ಸದಸ್ಯರಾಗಿ 16 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭ ತಾಲೂಕು ಘಟಕದ ಗೌರವಾಧ್ಯಕ್ಷ ಕಲ್ಲು ಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮುದ್ದಿನ ಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯೆ ರಾಜೇಶ್ವರಿ, ಧರ್ಮಪ್ಪ, ಕಾಂತರಾಜ್, ಸೋಮಪ್ಪ ಇತರರು ಉಪಸ್ಥಿತರಿದ್ದರು.