ಕುಶಾಲನಗರ, ಮೇ 10: ಕುಶಾಲನಗರದ ಜಿಎಸ್ ಫ್ರೆಂಡ್ಸ್ ಗ್ರೂಪ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಜಿಎಸ್ ಟ್ರೋಫಿ-2019 ರಾಜ್ಯಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 18 ಮತ್ತು 19 ರಂದು ಕ್ರೀಡಾಕೂಟ ನಡೆಯಲಿದೆ. ಪಂದ್ಯಾಟ ವಿಜೇತರಿಗೆ ಪ್ರಥಮ ಬಹುಮಾನ ರೂ. 50 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. 25 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವದು. ಆಸಕ್ತ ತಂಡಗಳು 14 ರ ಒಳಗಾಗಿ ನೊಂದಾಯಿಸಿಕೊಳ್ಳಬೇಕಾಗಿದ್ದು ಹೆಚ್ಚಿನ ಮಾಹಿತಿಗಾಗಿ ಗುರು-9611777737 ಸಂಪರ್ಕಿಸಲು ಕೋರಲಾಗಿದೆ.