ಮಡಿಕೇರಿ, ಮೇ 10 : ಮಡಿಕೇರಿ ವಿದ್ಯುತ್ ಉಪ-ಕೇಂದ್ರದಿಂದ ಹೊರ ಹೋಗುವ ಕೋಟೆ ಫೀಡರ್‍ನಲ್ಲಿ ದಸರಾ ಪೂರ್ವ ಸಿದ್ಧತೆ ಕಾರ್ಯವನ್ನು ನಿರ್ವಹಿಸಬೇಕಿರುವದ ರಿಂದ ತಾ.11 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಚೈನ್‍ಗೇಟ್, ಸುದರ್ಶನ ಸರ್ಕಲ್, ಜಯನಗರ, ಕೊಡಗು ವಿದ್ಯಾಲಯ, ಪುಟಾಣಿನಗರ, ಸಿದ್ದಾಪುರ ರಸ್ತೆ, ದೇಚೂರು, ಕಾಲೇಜು ರಸ್ತೆ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.