ವೀರಾಜಪೇಟೆ, ಮೇ 9: ದೇವಣಗೇರಿಯ ಪ್ಲಾಂಟರ್ಸ್ ಕ್ಲಬ್ ವತಿಯಿಂದ ದೇವಣಗೇರಿ ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಜಮ್ಮಾ ಕುಟುಂಬಗಳ ನಡುವೆ ನಡೆಸಲಾಗುತ್ತಿರುವ ಫೈವ್‍ಸೈಡರ್ಸ್ ಫುಟ್ಬಾಲ್ ನಾಕೌಟ್ ಪಂದ್ಯಾಟದಲ್ಲಿ ಐಚಂಡ, ಒಕ್ಕಲಿಗರ, ಐಮಂಡ, ಪಂದಿಕಂಡ, ಮೂಕೊಂಡ, ಅಡ್ಡಂಡ, ಪಾರೋಂಗಡ, ಕೊಂಡಿರ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ.

ಐಚಂಡ ತಂಡ 5-4 ಗೋಲುಗಳಿಂದ, ಚೆಕ್ಕೇರ, ಒಕ್ಕಲಿಗರ(ಒಂಟಿಯಂಗಡಿ) ತಂಡ 3-0 ಗೋಲುಗಳಿಂದ ಮಾಚಂಗಡ, ಐಮಂಡ ತಂಡ 6-1 ಗೋಲುಗಳಿಂದ ಪುಟ್ಟಿಚಂಡ, ಪಂದಿಕಂಡ ತಂಡ 5-0 ಗೋಲುಗಳಿಂದ ಕಟ್ಟೆಮನೆ, ಮೂಕೋಂಡ ತಂಡ 3-1 ಗೋಲುಗಳಿಂದ ಬೊಳ್ಳಚೆಟ್ಟಿರ, ಅಡ್ಡಂಡ ತಂಡ 4-1 ಗೋಲುಗಳಿಂದ ಚೇರಿಯಪಂಡ, ಪಾರೋಂಗಡ ತಂಡ 7-2 ಗೋಲುಗಳಿಂದ ಬೊಳಿಯಾಡಿರ, ಕೊಂಡಿರ 4-2 ಗೋಲುಗಳಿಂದ ಒಕ್ಕಲಿಗರ (ಕೋಟೆಕೊಪ್ಪ) ತಂಡವನ್ನು ಪರಾಭವ ಗೊಳಿಸಿತು.