ಶ್ರೀಮಂಗಲ, ಮೇ 10: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆÇರಾಡು ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದಿಂದ ಸ್ಥಳಿಯ ಗ್ರಾ.ಪಂ. ನಿಂದ ನಿರಾಪೇಕ್ಷಣಾ ಪತ್ರ ನೀಡಲು ತಡೆ ಮಾಡಿದ್ದರೂ, ಅನಧಿಕೃತವಾಗಿ ಹೋಂ ಸ್ಟೇ, ರೆಸಾರ್ಟ್‍ಗಳನ್ನು ನಡೆಸುತ್ತಿರುವ ಬಗ್ಗೆ ಬಿರುನಾಣಿ ಗ್ರಾ.ಪಂ.ಗೆ ಮತ್ತು ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಮೇಲೆ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಅನುಮಾನಸ್ಪದ ನಡೆಯಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಮುಂದಿನ ಎರಡು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತೀವ್ರ ತರಹದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಬಿರುನಾಣಿ ಗ್ರಾಮ ಪಂಚಾಯಿತಿಗೆ ತೆರಳಿದ ಗ್ರಾಮಸ್ಥರು ಪಿ.ಡಿ.ಓ. ಸುರೇಶ್ ಹಾಗೂ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ಅವರೊಂದಿಗೆ ಗ್ರಾಮ ಪಂಚಾಯಿತಿಯಿಂದ ಯಾವ ರೀತಿಯ ಅನುಮತಿಯನ್ನು ಹೋಂ ಸ್ಟೇ, ರೆಸಾರ್ಟ್‍ಗೆ ನೀಡಲಾಗಿದೆ ಪ್ರಶ್ನಿಸಿ ಫಾರ್ಮ್ ಹೌಸ್ ಎಂದು ನಮೂದಿಸಿ ವಿದ್ಯುತ್ ಸಂಪರ್ಕ ಪಡೆಯಲಾಗಿರುವ ಬಗ್ಗೆ ಗಮನ ಸೆಳೆದರು.

ಈ ಸಂದರ್ಭ ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಗಮನ ಸೆಳೆದು ಪೆÇರಾಡು ಗ್ರಾಮದ ಕಕ್ಕಟ್ ನದಿ ದಡದÀಲ್ಲಿ ಸ್ಥಳೀಯ ಬೆಳೆಗಾರರೊರ್ವರಿಂದ ಬೆಂಗಳೂರು ಮೂಲದ ದಂಪತಿಗಳು ಕೃಷಿ ಜಾಗವನ್ನು ಖರೀದಿಸಿ ನಂತರ ಫಾರ್ಮ ಹೌಸ್ ನಿರ್ಮಿಸುವದಾಗಿ ಪರವಾನಗೆ ಪಡೆದು ಹೋಂ ಸ್ಟೇ, ರೆಸಾರ್ಟ್‍ಗಾಗಿ ಹಲವು ಕಾಟೇಜ್, ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಒಂದು ವರ್ಷದ ಹಿಂದೆ ವಾರ್ಡ್ ಸಭೆ, ಸಾಮಾನ್ಯ ಸಭೆಯಲ್ಲಿ ವಿರೋಧ ಹಿನ್ನೆಲೆ ಸಂಬಂಧಿಸಿದ ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಗ್ರಾಮ ಪಂಚಾಯಿತಿ ನೋಟಿಸ್ ಮಾಡಿ ನಾಮಫಲಕ ತೆರವುಗೊಳಿಸಿ ಹೋಂ ಸ್ಟೇ, ರೆಸಾರ್ಟ್ ನಡೆಸದಂತೆ ಇದರಿಂದ ಸ್ಥಳೀಯ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ, ನದಿ ಕಲುಷಿತವಾಗುತ್ತಿದೆ ಎಂಬ ದೂರು ಬಂದಿರುವ ಬಗ್ಗೆ ಮಾಲೀಕರಿಗೆ ನೋಟಿಸು ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರಾದ ಕಾಯಪಂಡ ಸುನೀಲ್, ಅಣ್ಣೀರ ಮಲ್ಲಿಗೆ ಪೂಣಚ್ಚ, ಪೆÇರಾಡು ಊರು ಪಂಚಾಯಿತಿ ಅಧ್ಯಕ್ಷ ಮೀದೇರಿರ ಮಂಜುನಾಥ್, ಕಾರ್ಯದರ್ಶಿ ಬಲ್ಯಮಿದೇರಿರ ಸಂಪತ್ ನೇತೃತ್ವದಲ್ಲಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಬಂಧಿಸಿದ ರೆಸಾರ್ಟ್‍ಗೆ ತೆರಳಿ ಮಾಲೀಕರ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದಲ್ಲದೆ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ, ಪಿ.ಡಿ.ಓ ಸುರೇಶ, ಶ್ರೀಮಂಗಲ ಠಾಣಾಧಿಕಾರಿ (ಪ್ರಭಾರ) ಸಾಬು ಅವರಿಗೆ ಲಿಖಿತ ದೂರು ನೀಡಿದರು. ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಸಮಯ ಮುಗಿದ ತಕ್ಷಣ ವಿಶೇಷ ಸಭೆ ಕರೆದು ಹೋಂ ಸ್ಟೇ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು. ಬಲ್ಯಮಿದೇರಿರ ವಿಜಯ ಪ್ರಸಾದ್, ಮಿದೇರಿರ ಸೋಮಣ್ಣ ಚಿಟ್ಟಿಯಪ್ಪ, ಬಲ್ಯಮಿದೇರಿರ ಬಾನು, ಮಲ್ಲೇಂಗಡ ಸುರಾಜ್, ಎಂ.ಬಿ. ಸುರೇಶ್, ಬಲ್ಯಮಿದೇರಿರ ಗಣಪತಿ, ಸಿದ್ದು ನಾಚಪ್ಪ, ಮಿದೇರಿರ ಬೋಸ್, ಬಲ್ಯಮಿದೇರಿರ ಬೆಳ್ಯಪ್ಪ, ಮಿದೇರಿರ ಅಯ್ಯಪ್ಪ, ಬಲ್ಯಮಿದೇರಿರ ಸಚಿನ್, ಬಲ್ಯಮಿದೇರಿರ ಶರಣು ಚಂಗಪ್ಪ, ಕಾಯಪಂಡ ಕಾವೇರಪ್ಪ ಮತ್ತಿತರರು ಹಾಜರಿದ್ದರು.