ಶನಿವಾರಸಂತೆ, ಮೇ 9: ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಹಿಂಭಾಗದ ಹಾವುಗೊಲ್ಲರ ಹಟ್ಟಿಯಲ್ಲಿ ವಾಸವಿರುವ ಕೂಲಿ ಕಾರ್ಮಿಕರಾದ ಗಂಡ-ಹೆಂಡತಿಯರಿಬ್ಬರು ಜಗಳವಾಡಿಕೊಂಡು ಗಂಡ-ಹೆಂಡತಿಗೆ ಹೊಡೆಯುತ್ತಿದ್ದಾಗ, ಪಕ್ಕದ ಮನೆಯಲ್ಲಿ ವಾಸವಿರುವ ಸಂಬಂಧಿಯೊಬ್ಬ ಜಗಳ ಬಿಡಿಸಲು ಬಂದಾಗ ‘ನನ್ನ ಹೆಂಡತಿಯನ್ನು ನಾನು ಏನು ಬೇಕಾದರು ಮಾಡುತ್ತೇನೆ ಕೇಳಲು ನೀನು ಯಾರು’ ಎಂದು ಹೇಳಿ ಕೈಯಲ್ಲಿದ್ದ ದೊಣ್ಣೆಯಿಂದ ಜಗಳ ಬಿಡಿಸಲು ಬಂದಾತನ ಮೇಲೆ ಹಲ್ಲೆ ಮಾಡಿ ಗಾಯಪಡಿಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಾವುಗೊಲ್ಲರ ಕಾರ್ಮಿಕ ಕಿರಣ್ ಎಂಬಾತ ಸೋಮವಾರ ಸಂಜೆ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿ ಹೊಡೆಯುತ್ತಿದ್ದ. ಇದನ್ನು ನೋಡಿದ ಪಕ್ಕದ ನಿವಾಸಿ ಹಾವುಗೊಲ್ಲರ ಬಾಬು ಎಂಬಾತ ಜಗಳ ಬಿಡಿಸಲು ಬಂದಾಗ ಕೈಯಲ್ಲಿದ್ದ ದೊಣ್ಣೆಯಿಂದ ಬಾಬುವಿನ ತಲೆ ಹಾಗೂ ಕಿವಿಯ ಭಾಗಕ್ಕೆ ಹೊಡೆದು ಗಾಯಪಡಿಸಿದ್ದಾನೆ. ನೋವು ಹಾಗೂ ಖರ್ಚಿಗೆ ಹಣ ಕೊಡದೆ ಇದ್ದುದ್ದರಿಂದ ಗಾಯಾಳು ಇಂದು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಸಹಾಯಕ ಠಾಣಾಧಿಕಾರಿ ಹೆಚ್.ಎಂ. ಗೋವಿಂದ ಪ್ರಕರಣ ದಾಖಲಿಸಿದ್ದಾರೆ.
-ನರೇಶ್