ಮಡಿಕೇರಿ, ಮೇ 10: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ-2019 ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.11 ರಿಂದ (ಇಂದಿನಿಂದ) 19ರವರೆಗೆ ನಡೆಯಲಿದೆ.ಮಡಿಕೇರಿ, ಮೇ 10: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಾಲ್ಕನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ-2019 ಮರಗೋಡಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.11 ರಿಂದ (ಇಂದಿನಿಂದ) 19ರವರೆಗೆ ನಡೆಯಲಿದೆ.(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಉದ್ಘಾಟನಾ ಸಮಾರಂಭದ ಬಳಿಕ ಮರಗೋಡುವಿನ ವೈಷ್ಣವಿ ಫುಟ್ಬಾಲ್ ಕ್ಲಬ್ ಹಾಗೂ ಮಡಿಕೇರಿಯ ಮೀಡಿಯಾ ಫ್ರೆಂಡ್ಸ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಏರ್ಪಡಿಸಲಾಗಿದೆಯೆಂದು ಮಾಹಿತಿ ನೀಡಿದರು.

ತಾ.19 ರಂದು ಬೆಳಗ್ಗೆ 9.30 ಕ್ಕೆ ಮೊದಲ ಸೆಮಿಫೈನಲ್, 10.30ಕ್ಕೆ 2ನೇ ಸೆಮಿಫೈನಲ್ ಹಾಗೂ ಅಪರಾಹ್ನ 1.30ಕ್ಕೆ 3 ಮತ್ತು 4ನೇ ಸ್ಥಾನಗಳಿಗೆ ಪಂದ್ಯಾಟ ನಡೆಯಲಿದೆ. 2.30ಕ್ಕೆ ನಡೆಯುವ ಫೈನಲ್ ಪಂದ್ಯಾಟವನ್ನು ಕಾವೇರಿ ಗ್ರೂಪ್ಸ್ ಮುಖ್ಯ ಕಾರ್ಯನಿರ್ವಾಹಕ ದೇಲಂಪಾಡಿ ಹೆಚ್. ಗಣೇಶ್ ಅವರು ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಬೈಕ್ ಸ್ಟಂಟ್ ಹಾಗೂ ಮ್ಯಾಜಿಕ್ ಶೋವನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಶ್ಯಂತ್ ರಮೇಶ್, ನಿರ್ದೇಶಕರಾದ ಪಾಂಡನ ಹೃಷಿಕೇಶ್ ಹಾಗೂ ಚೆರಿಯಮನೆ ಚೇತನ್ ಉಪಸ್ಥಿತರಿದ್ದರು.