ಸಿದ್ದಾಪುರ, ಮೇ 10: ಮುಖ್ಯರಸ್ತೆಯ ಬದಿಯಲ್ಲಿರುವ ಬಟ್ಟೆ ಅಂಗಡಿಯೊಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆಯಿತು.

ಸ್ಥಳೀಯ ಯುವಕರು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನೀರು ಹಾಯಿಸುವ ಮೂಲಕ ನಂದಿಸಿ ಭಾರೀ ಅನಾಹುತವನ್ನು ತಪ್ಪಿದರು.

ಆದರ್ಶ್ ಬಟ್ಟೆ ಅಂಗಡಿಗೆ ಬೆಳಗಿನ ಜಾವದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಅಂಗಡಿಯ ಮುಂಭಾಗದ ಮೇಲ್ಛಾವಣಿ ಹೊತ್ತಿ ಉರಿಯುತ್ತಿತ್ತು. ರಸ್ತೆಯಲ್ಲಿ ಹೋಗುತ್ತಿದ್ದವರು ನೀಡಿದ ಮಾಹಿತಿಯಿಂದ ಸ್ಥಳೀಯರು ಎಚ್ಚೆತ್ತುಕೊಂಡು ಸಕಾಲಕ್ಕೆ ಸ್ವಂದಿಸಿ ನೀರು ಹಾಯಿಸಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ

ಸ್ಥಳಕ್ಕೆ ಗೊಣಿಕೊಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.