ಸೋಮವಾರಪೇಟೆ, ಮೇ 9: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಜಂಬೂರು ಗ್ರಾಮ ನಿವಾಸಿ ಮಂಜುನಾಥ (47) ಎಂಬವರು ಕಳೆದ ತಾ. 10.09.2018ರಂದು ಮಾದಾಪುರಕ್ಕೆ ತೆರಳಿದವರು ನಂತರ ಮನೆಗೆ ವಾಪಸ್ ಬಂದಿಲ್ಲ ಎಂದು ಅವರ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾಗಿರುವ ಮಂಜುನಾಥ್ ಅವರ ಬಗ್ಗೆ ಮಾಹಿತಿಯಿದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ, ದೂ:08276 282040 ಸಂಖ್ಯೆಗೆ ತಿಳಿಸುವಂತೆ ಠಾಣಾಧಿಕಾರಿ ಶಿವಶಂಕರ್ ಮನವಿ ಮಾಡಿದ್ದಾರೆ.