ಮೂರ್ನಾಡು, ಮೇ 10: ನಾಪೋಕ್ಲು ವಿದ್ಯುತ್ ಮಾರ್ಗದಲ್ಲಿ ಲೈನ್ ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗಿರುವದರಿಂದ ತಾ. 11 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಾಪೋಕ್ಲು ಫೀಡರ್‍ನಿಂದ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ನಾಪೋಕ್ಲು, ಹೊದ್ದೂರು, ಕುಂಬಳದಾಳು, ಕಕ್ಕಬೆ, ಕುಯ್ಯಂಗೇರಿ, ಬಲ್ಲಮಾವಟ್ಟಿ, ನೆಲಜಿ, ಹೊದವಾಡ, ಎಮ್ಮೆಮಾಡು ಸುತ್ತಮುತ್ತ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.