ಮಡಿಕೇರಿ, ಮೇ 9: ಇಲ್ಲಿನ ಜಾಮಿಯ ಮಸೀದಿ ಆಡಳಿತ ಸಲಹಾ ಸಮಿತಿ ಅಧ್ಯಕ್ಷರಾಗಿ ಮೆಹಬೂಬ್ ಬಾಷ, ಉಪಾಧ್ಯಕ್ಷರಾಗಿ ಮನಜರ್, ಕಾರ್ಯದರ್ಶಿಯಾಗಿ ಎಂ.ಹೆಚ್. ನೂರುಲ್ ಹುದಾ ಖುರೇಷಿ, ಖಜಾಂಚಿಯಾಗಿ ಕರಾಮತ್ ವುಲ್ಲಾಖಾನ್ ಆಯ್ಕೆಗೊಂಡಿದ್ದಾರೆ. ಮಸೀದಿಯ ಮುತವಲ್ಲಿ ಫೈರೋಜ್ ಮಹಮ್ಮದ್ ಖಾನ್ ಈ ಆಯ್ಕೆ ಮಾಡಿದ್ದಾರೆ. ಸದಸ್ಯರಾಗಿ ಫಜಲ್ ಖಾನ್, ಜಹೀರ್ ಬೇಗ್, ಎ.ಎಂ. ಅಯ್ಯುಬ್‍ಖಾನ್, ಸೈಯ್ ಯೂಸೂಫ್ (ಯಾಸೀನ್) ನೇಮಕಗೊಂಡಿದ್ದಾರೆ.