ಗೋಣಿಕೊಪ್ಪಲು, ಮೇ 9: ತೇಗದ ಮರ ಕಳವು ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ. ಏಪ್ರಿಲ್ 20 ರಂದು ಕಳತ್ಮಾಡು ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ವಶಪಡಿಸಿಕೊಂಡ ವಾಹನ ಸಂಖ್ಯೆ (ಕೆಎ 12 7605)ರಲ್ಲಿ ಅಕ್ರಮವಾಗಿ ತೇಗ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಆರೋಪಿಗಳಾದ ದಿನೆಂದ್ರ ಹಾಗೂ ಸೈಯದ್ ಮಂಜೂರ್ ಇವರುಗಳನ್ನು ಇಂದು ಬಂಧಿಸಲಾಗಿದೆ.

ಕಾರ್ಯಚರಣೆಯಲ್ಲಿ ವೀರಾಜಪೇಟೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೊಶಿಣಿ ಅವರ ಮಾರ್ಗ ದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಕೆ.ಪಿ. ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ಗಳಾದ ಕಳ್ಳೀರ ಎಂ. ದೇವಯ್ಯ ಹಾಗೂ ಅರಣ್ಯ ರಕ್ಷಕ ಅರುಣ. ಸಿ ಮತ್ತು ಆರ್‍ಆರ್‍ಟಿ ತಂಡದ ಆದರ್ಶ, ಮಂಜು, ಸಲೀಂ, ವಿನೋದ್, ದಿಲೀಪ್ ಮುರುಗನ್ ಹಾಗೂ ವಾಹನ ಚಾಲಕ ಶರತ್ ಪಾಲ್ಗೊಂಡಿದ್ದರು.