ಮಡಿಕೇರಿ, ಮೇ 9: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ತಾ. 12 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಪತ್ರಕರ್ತರ ಒಟ್ಟು ನಾಲ್ಕು ತಂಡಗಳು ಪಾಲ್ಗೊಳ್ಳಲಿವೆ. ಮಡಿಕೇರಿಯ ಪ್ರಿಂಟ್ ಪಂಟರ್ಸ್,ಮೀಡಿಯಾ ಇಲೆವೆನ್ ವೀರಾಜಪೇಟೆಯ ಸೌತ್ ಟೈಗರ್ಸ್ ಹಾಗೂ ಸೋಮವಾರಪೇಟೆ ಪ್ರೆಸ್ ತಂಡಗಳು ಭಾಗವಹಿಸಲಿವೆ.
ತಾ. 12 ರ ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಪಂದ್ಯ ಆರಂಭವಾಗಲಿದ್ದು ಆಟಗಾರರಿಗೆ ಪತ್ರಕರ್ತರ ಸಂಘದ ಸದಸ್ಯತ್ವದ ಗುರುತಿನ ಚೀಟಿ ಕಡ್ಡಾಯವಾಗಿದೆ.ಪಂದ್ಯದ ವೇಳೆ ಯಾವದೇ ಸಮಸ್ಯೆಗಳಿದ್ದರೂ ನಾಯಕನಿಗೆ ಮಾತ್ರ ಚರ್ಚಿಸಲು ಅವಕಾಶವಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ನಿಗದಿತ ಸಮಯಕ್ಕೆ ಎಲ್ಲಾ ತಂಡದ ಆಟಗಾರರು ಹಾಜರಿರಬೇಕೆಂದು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾಸಭೆ
ಜಿಲ್ಲಾ ಪ್ರತಕರ್ತರ ಸಂಘದ 2019 ನೇ ಸಾಲಿನ ವಾರ್ಷಿಕ ಮಹಾಸಭೆ ತಾ. 26 ರಂದು ಪತ್ರಿಕಾಭವನದಲ್ಲಿ ನಡೆಯಲಿದೆ. ಅಂದು 10.30 ಗಂಟೆಗೆ ಜಿಲ್ಲಾ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ಮಹಾಸಭೆ ನಡೆಯಲಿದ್ದು, ಠರಾವು ಮಂಡಿಸುವ ಸಂಘದ ಸದಸ್ಯರು ತಾ. 18 ರೊಳಗೆ ತಲುಪುವಂತೆ ಸಂಘದ ಕಚೇರಿಗೆ ತಲಪಿಸಬೇಕೆಂದು ಅನುಕಾರ್ಯಪ್ಪ ತಿಳಿಸಿದ್ದಾರೆ.