ಗೋಣಿಕೊಪ್ಪಲು, ಮೇ 9: ಗೋಣಿಕೊಪ್ಪಲುವಿನ ಆಟೋ ಮೊಬೈಲ್ ವರ್ಕರ್ಸ್ ಅಸೋಷಿಯೇಷನ್ ವತಿಯಿಂದ 5ನೇ ವರ್ಷದ ಕಾರ್ಮಿಕ ದಿನಾಚರಣೆಯು ಕಾವೇರಿ ಹಿಲ್ಸ್ ಬಡಾವಣೆಯ ಅಮ್ಮಕೊಡವ ಸಮುದಾಯ ಭವನದಲ್ಲಿ ನಡೆಯಿತು.

ನಗರದ ಆಟೋ ಮೊಬೈಲ್‍ನ ಮಾಲೀಕರು ಸೇರಿದಂತೆ ಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯೋಧ ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಹೆಚ್.ಎನ್. ಮಹೇಶ್, ಅಗ್ನಿಶಾಮಕ ದಳದ ಠಾಣಾಧಿಕಾರಿ ಬಟ್ಟಿಯಂಡ ಪಳಂಗಪ್ಪ ಸಮಿತಿಯ ನಿರ್ದೇಶಕ ದಾಮೋದರನ್, ಶಶಿ ಹಾಗೂ ಸಹದೇವನ್ ಅವರನ್ನು ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷ ಅಶ್ರಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷ ದಾಮೋದರ್, ಉಪಾಧ್ಯಕ್ಷ ಬಶೀರ್, ಖಜಾಂಚಿ ಬ್ಯಾಸ್ಟಿಟ್, ನಿರ್ದೇಶಕರಾದ ಜೋಸೆಫ್, ಅನೀಲ್, ಹ್ಯಾರಿಶ್, ಅಶೋಕ್ ಮುಂತಾದವರು ಭಾಗವಹಿಸಿದ್ದರು. ಕಾರ್ಯದರ್ಶಿ ಸಿದ್ದಿಕ್ ಸ್ವಾಗತಿಸಿ, ನಿರ್ದೇಶಕ ರಫೀಕ್ ನಿರೂಪಿಸಿ, ಅನಿಲ್ ವಂದಿಸಿದರು.