ಚೆಟ್ಟಳ್ಳಿ, ಮೇ 10: ಭಾರತೀಯ ಅನಿವಾಸಿಗಳ ಸಂಘವಾದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಬಡ ಮುಸ್ಲಿಂ ಕುಟುಂಬಗಳಿಗೆ ಉಚಿತ ರಂಜಾನ್ ಕಿಟ್ ವಿತರಣೆ ಸುಂಟಿಕೊಪ್ಪದ ಖತೀಜುಮ್ಮಾ ಮದ್ರಸದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಕೊಡಗಿನ ಬಡವರ ಬೆಳಕು ವೇದಿಕೆಯ ರಾಜ್ಯಾಧ್ಯಕ್ಷ ಎಂ.ಹೆಚ್. ಮುಹಮ್ಮದ್, ಕೊಡಗಿನ 250 ಕುಟುಂಬಗಳಿಗೆ ಉಚಿತ ರಂಜಾನ್ ಕಿಟ್ ವಿತರಿಸಲಾಯಿತು. ಅದೇ ರೀತಿ ಕೊಡಗಿನ ಬಡವರ ಬೆಳಕು ವೇದಿಕೆ ವತಿಯಿಂದ ನೆರೆಯಿಂದ ನೊಂದ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಡುತ್ತಿದ್ದೇವೆ ಎಂದರು. ಸಿ.ಎಂ. ಹಮೀದ್ ಉಸ್ತಾದ್ ಮಾತನಾಡಿ, ಕೊಡಗಿನ ಬಡವರ ಬೆಳಕು ಎಂಬ ಸಂಘಟನೆ ಹಲವು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಾ ಬಂದಿದೆ ಎಂದರು.
ನಮ್ಮ ಕೊಡಗು ತಂಡದ ಸಂಸ್ಥಾಪಕಾಧ್ಯಕ್ಷ ಎಂ.ಆರ್. ನೌಶಾದ್ ಜನ್ನತ್ ಮಾತನಾಡಿ, ಕೊಡಗಿನ 250 ಬಡ ಮುಸ್ಲಿಂ ಸಮುದಾಯನ್ನು ಗುರುತಿಸಿ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ವತಿಯಿಂದ ರಂಜಾನ್ ಕಿಟ್ಟನ್ನು ನೀಡುತ್ತಿದ್ದೇವೆ ಎಂದರು. ಈ ಸಂದರ್ಭ ರಂಜಾನ್ ಕಿಟ್ ವಿತರರಣೆಗೆ ಧನ ಸಹಾಯ ಮಾಡಿದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ನ ಭಾರತೀಯ ಅನಿವಾಸಿಗಳಿಗೆ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು. ವೇದಿಕೆಯಲ್ಲಿ ಮಜೀದ್, ಅಶ್ರಫ್, ಹಸಂಗುಂಜ್ಞಿ ಹಾಜಿ, ತಂಡದ ಖಜಾಂಚಿ ಲೋಹಿತ್, 30 ಗ್ರಾಮಗಳ ಕಮಿಟಿ ಪ್ರಮುಖರು ಹಾಜರಿದ್ದರು.