ಸೋಮವಾರಪೇಟೆ,ಮೇ.9: ಡಿವೈನ್ ಪಾರ್ಕ್ ಟ್ರಸ್ಟ್ನ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳಗದ ವತಿಯಿಂದ ತಾ. 10ರಂದು (ಇಂದು) ಸಂಜೆ 4 ಗಂಟೆಗೆ ಸ್ಥಳೀಯ ಪತ್ರಿಕಾ ಭವನ ಸಭಾಂಗಣದಲ್ಲಿ ವಿಶೇಷ ಸತ್ಸಂಗ ಕಾರ್ಯಕ್ರಮ ನಡೆಯಲಿದೆ ಎಂದು ಬಳಗದ ಮಮತ ತಿಳಿಸಿದ್ದಾರೆ.
ನಿವೃತ್ತ ಶಿಕ್ಷಕಿ ಟಿ.ಎ. ಪದ್ಮವೇಣಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕಾಫಿ ಮಂಡಳಿಯ ನಿವೃತ್ತ ಅಧಿಕಾರಿ ಕೆ. ಸುಧೇಶ್ರಾವ್ ಅವರು ಭಾಗವಹಿಸಲಿದ್ದಾರೆ.