ಮಡಿಕೇರಿ, ಮೇ 8: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ತಾ. 9 ರಂದು (ಇಂದು) ಬೆಳಿಗ್ಗೆ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಶಂಕರ ಜಯಂತಿ ಪ್ರಯುಕ್ತ ಪೂಜಾ ಕೈಂಕರ್ಯ ಏರ್ಪಡಿಸಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ರುದ್ರಾಭಿಷೇಕ ಪೂರ್ವ ಶಿವಪೂಜೆ, 10 ಗಂಟೆಯಿಂದ ಶಂಕರ ಸ್ತೋತ್ರ, ಶ್ರೀ ಗಣೇಶ್ ಪಂಚರತ್ನಂ, ಏಕಸ್ಲೋಕೀ, ದಶಸ್ಲೋಕೀ, ಶ್ರೀ ಲಲಿತ ಪಂಚರತ್ನಂ, ಗುರುವಷ್ಟಕಂ, ನಿರ್ವಾಣಷಟ್ಕಮ್, ಶಾರದಾಭುಜಂಗ ಪ್ರಯಾತಾಷ್ಟಕಂ, ಸೌಂದರ್ಯಲಹರೀ, ಶ್ರೀ ದೇವಿ ಅಪರಾಧಕ್ಷಮಾಪಣಾ ಸ್ತೋತ್ರ ಇತ್ಯಾದಿ ಸ್ತೋತ್ರ ಪಾರಾಯಣ ನಡೆಯಲಿದೆ. ಕೂಡಿಗೆ ದುರ್ಗಾಪರಮೇಶ್ವರಿ ದೇಗುಲದ ಅರ್ಚಕ ಪರಮೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮಹಾಮಂಗಳಾರತಿ ಬಳಿಕ ಪ್ರಸಾದ ಭೋಜನ ನಡೆಯಲಿದೆ ಎಂದು ನಿಧಿ ಪ್ರಕಟಣೆ ತಿಳಿಸಿದೆ.