ಮಡಿಕೇರಿ, ಮೇ 8: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತದ ಬೇಸಿಗೆಯ ಸಂದರ್ಭ ಒಂದೊಂಡೆಗಳಲ್ಲಿ ಒಂದೊಂದು ರೀತಿಯ ವಾತಾವರಣ ಕಂಡು ಬರುತ್ತಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಅಧಿಕ ಪ್ರಮಾಣದ ಮಳೆ ಸುರಿದಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ನಿರೀಕ್ಷಿತ ಮಳೆಯೇ ಆಗದಿರುವದು ವರದಿಯಾಗಿದೆ.

ಮಳೆಗಾಲ ಆರಂಭಕ್ಕೆ ಮುಂಚಿತವಾಗಿಯೇ ಕೂಡಿಗೆ - ಕುಶಾಲನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿ - ಮಳೆ, ಗುಡುಗು ಕಂಡು ಬಂದಿದ್ದು, ಒಂದಷ್ಟು ಹಾನಿಯೂ ಉಂಟಾಗಿದೆ. ನಾಪೋಕ್ಲು ಹೋಬಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಈ ತನಕ ಅಧಿಕ ಮಳೆ ಸುರಿದಿದ್ದರೆ, ದಕ್ಷಿಣ ಕೊಡಗಿನ ಬಹುತೇಕ ಕಡೆಗಳಲ್ಲಿ ತಡವಾಗಿ ಒಂದಷ್ಟು ಮಳೆಯಾಗಿದೆ. ಕೆಲವು ದಿನಗಳ ಹಿಂದೆ ವಾಯುಭಾರ ಕುಸಿತದಿಂದ ಫನಿ ಚಂಡಮಾರುತದ ಪರಿಸ್ಥಿತಿಯಿಂದಾಗಿ ದಕ್ಷಿಣ ಕೊಡಗಿನ ಹಲವು ಪ್ರದೇಶಗಳಲ್ಲಿ ತುಸು ಮಳೆಯಾಗಿದ್ದು, ಬಿಸಿಲಿನ ಧಗೆಯೊಂದಿಗೆ ಕಾಫಿ ಬೆಳೆಗೆ ಅನಿವಾರ್ಯವಾಗಿದ್ದ ಮಳೆಯನ್ನು ಹಲವು ತಿಂಗಳುಗಳ ಅವಧಿಯ ಬಳಿಕ ಅಲ್ಲಿನ ಜನತೆ ಕಾಣುವಂತಾಗಿ ನಿಟ್ಟುಸಿರುಬಿಟ್ಟಿದ್ದಾರೆ. ಆದರೂ ಕಾಫಿ ಹೂ ಮಳೆ ಈ ಪ್ರದೇಶಗಳಲ್ಲಿ ತೀರಾ ವಿಳಂಬವಾದ ಕಾರಣದಿಂದಾಗಿಯೂ ಮುಂದಿನ ಫಸಲಿನತ್ತಲೂ ಜನರು ಚಿಂತೆ ಎದುರಿಸುವಂತಾಗಿದೆ.ಸೊಳ್ಳೆಗಳ ಕಾಟ ಜಿಲ್ಲಾ ಕೇಂದ್ರವಾದ ಮಡಿಕೇರಿಯೂ ಸೇರಿದಂತೆ ಬಹುತೇಕ ಕಡೆ ಸೊಳ್ಳೆಗಳ ಕಾಟ ತೀರಾ ಹೆಚ್ಚಾಗಿ ಕಂಡು ಬರುತ್ತಿದೆ. ಸಂಜೆ, ರಾತ್ರಿ ಮತ್ತು ಬೆಳಗ್ಗಿನ ಜಾವದಲ್ಲಿ ಕೂಡ ಸೊಳ್ಳೆಗಳ ಕಾಟದಿಂದ ಜನತೆ ಪರಿತಪಿಸು ವಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ, ಸಂಬಂಧಿಸಿದ ಸ್ಥಳೀಯ ಪಂಚಾಯಿತಿಗಳು ತುರ್ತು ಗಮನ ಹರಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಪೋಕ್ಲು ಹೋಬಳಿಗೆ ಅಧಿಕ ಮಳೆ

ಜಿಲ್ಲೆಯಲ್ಲಿ ಈ ತನಕ ನಾಪೋಕ್ಲು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಧಿಕ ಮಳೆ ಸುರಿದಿದೆ. ಈ ವಿಭಾಗದಲ್ಲಿ ಬಹುತೇಕ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜನವರಿಯಿಂದ ಈ ತನಕ

(ಮೊದಲ ಪುಟದಿಂದ) ನಾಪೋಕ್ಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ 11 ರಿಂದ 16 ಇಂಚಿನಷ್ಟು ಮಳೆಯಾಗಿರುವ ಕುರಿತೂ ವರದಿಯಾಗಿದೆ. ಅದರಲ್ಲೂ ಏಪ್ರಿಲ್‍ನಲ್ಲಿ ಹೆಚ್ಚು ಮಳೆಯಾಗಿದೆ.

ಇನ್ನುಳಿದಂತೆ ಜಿಲ್ಲಾ ಅಂಕಿ - ಅಂಶಗಳ ಇಲಾಖಾ ಮಾಹಿತಿಯಂತೆ ಮಡಿಕೇರಿ ಹೋಬಳಿಯಲ್ಲಿ 2.84 ಇಂಚು, ಭಾಗಮಂಡಲ 2, ಶಾಂತಳ್ಳಿ 4.16, ವೀರಾಜಪೇಟೆ 3.23, ಬಾಳಲೆ 2, ಅಮ್ಮತ್ತಿ 3.16, ಶ್ರೀಮಂಗಲ 4, ಹುದಿಕೇರಿ 3.52, ಬಾಳಲೆ 2, ಪೊನ್ನಂಪೇಟೆ 2.76, ಸೋಮವಾರಪೇಟೆ 1.48, ಸುಂಟಿಕೊಪ್ಪ 1.68, ಶನಿವಾರಸಂತೆ 2.26, ಶಾಂತಳ್ಳಿ 2.96, ಕುಶಾಲನಗರ ಹೋಬಳಿಯಲ್ಲಿ 2.76 ಇಂಚು ಮಳೆಯಾಗಿದೆ. ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಮಳೆಯ ಪ್ರಮಾಣ ಇನ್ನಷ್ಟು ಕಡಿಮೆ ಇದೆ.

ಶಾಲೆಯ ಚಾವಣಿ ಹಾರಿ ನಷ್ಟ

ನಾಪೆÉÇೀಕ್ಲು: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಬೇತು ಗ್ರಾಮದ ಸೇಕ್ರೆಡ್ ಹಾಟ್ರ್ಸ್ ಆಂಗ್ಲ ಮಾಧ್ಯಮ ಶಾಲಾ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಲಾಗಿದ್ದ ಸುಮಾರು 30 ಕ್ಕೂ ಅಧಿಕ ಶೀಟುಗಳು ಹಾರಿಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ.