ಮಡಿಕೇರಿ, ಮೇ 8: ಕೊಡಗು ಪ್ರೆಸ್ ಕ್ಲಬ್ ನೂತನ ನಿರ್ದೇಶಕರಾಗಿ ಬಿ.ಆರ್. ಸವಿತಾ ರೈ, ಎಂ.ಎನ್. ನಾಸಿರ್ ನೇಮಕಗೊಂಡಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಖಾಲಿ ಇದ್ದ ಎರಡು ಸ್ಥಾನಕ್ಕೆ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತೆಂದು ಪ್ರಧಾನ ಕಾರ್ಯದರ್ಶಿ ಆರ್.ಸುಬ್ರಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ 8 ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾ ಭವನದಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಮಹಾಸಭೆ ನಡೆಯಲಿದೆ. ಮಹಾಸಭೆಯಲ್ಲಿ ಠರಾವು ಮಂಡಿಸಲು ಇಚ್ಛಿಸುವವರು ಲಿಖಿತವಾಗಿ ಮೇ 25 ರೊಳಗೆ ಪತ್ರಿಕಾ ಭವನದಲ್ಲಿ ತಲಪಿಸಬೇಕು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮೇ 12 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುವ ಪತ್ರಕರ್ತರ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಕೊಡಗು ಪ್ರೆಸ್ ಕ್ಲಬ್ ವತಿಯಿಂದ 5 ಸಾವಿರ ರೂ. ದೇಣಿಗೆ ನೀಡಲು ನಿರ್ಧರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್, ವಿಘ್ನೇಶ್ ಎಂ. ಭೂತನಕಾಡು, ಖಜಾಂಚಿ ರೆಜಿತ್‍ಕುಮಾರ್ ಗುಹ್ಯ, ಜಂಟಿ ಕಾರ್ಯದರ್ಶಿ ನಾಗರಾಜ ಶೆಟ್ಟಿ, ನಿರ್ದೇಶಕ ಎಸ್.ಎಂ. ಮುಬಾರಕ್, ಚೀಯಂಡಿ ತೇಜಸ್ ಪಾಪಯ್ಯ, ಕಿಶೋರ್ ರೈ ಇದ್ದರು.