ಗೋಣಿಕೊಪ್ಪಲು, ಮೇ 8: ಕೊಡಗು ಜಿಲ್ಲೆಯ ಜಲಪ್ರಳಯ ಸಂದರ್ಭ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಕ್ತವಾಗಿ ಸ್ಪಂದಿಸಿದ್ದಾರೆ ಹಾಗೂ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಸಂದರ್ಭವೂ ನ್ಯಾಯಯುತ ಹೋರಾಟಕ್ಕೆ ಸಹಕಾರ ನೀಡಿರುವದಾಗಿ ರಾಜ್ಯ ಜೆಡಿಎಸ್ ಪರಿಶಿಷ್ಟ ಪಂಗಡದ ಉಪಾಧ್ಯಕ್ಷ ಪಿ.ಎಸ್.ಮುತ್ತ, ಮಾಜಿ ಜಿ.ಪಂ. ಸದಸ್ಯ ಹೆಚ್.ಬಿ. ಗಣೇಶ್ ಹಾಗೂ ನಿಟ್ಟೂರು ಗ್ರಾ.ಪಂ.ಮಾಜಿ ಸದಸ್ಯ ಜೆ.ಕೆ.ವಿಜಯ ತಿಳಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗು ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದಾರೆ. ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಕಳೆದ ಬಾರಿಯ ಜಲಪ್ರಳಯ ಸಂದರ್ಭವೂ ಜಿಲ್ಲೆಗೆ ಖುದ್ದು ಭೇಟಿ ನೀಡಿ ಹಲವು ಪರಿಹಾರ ಕಾರ್ಯಕ್ರಮಗಳಿಗೆ ಸ್ಪಂದಿಸಿದ್ದಾರೆ. ಅವರ ಬಗ್ಗೆ ಬಿಜೆಪಿ ಜನಪ್ರತಿನಿಧಿಗಳು ಅಪಪ್ರಚಾರ ನಡೆಸುತ್ತಿರುವದು ಸರಿಯಲ್ಲ ಎಂದು ಹೇಳಿದ್ದಾರೆ.

ಕೊಡಗು ಮೈಸೂರು ಕ್ಷೇತ್ರದಲ್ಲಿ ವಿಜಯಶಂಕರ್ ಗೆಲವು ಸಾಧಿಸಲಿದ್ದಾರೆ. ಪ್ರತಾಪ್ ಸಿಂಹ ಅವರು ತಮ್ಮ ಸಂಸದರ ಅನುದಾನದಲ್ಲಿ ಕೊಡಗು ಜಿಲ್ಲೆ, ಪಿರಿಯಾಪಟ್ಟಣ ಹಾಗೂ ಹುಣಸೂರು ವಿಧಾನ ಸಭಾ ಕ್ಷೇತ್ರಗಳಿಗೆ ಸಮಾನ ಹಂಚಿಕೆ ಮಾಡದೆ, ತಾರತಮ್ಯ ತೋರಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.