ಮಡಿಕೇರಿ ಮೇ 8 : ಕೊಡಗು ಜಿಲ್ಲಾ ಬಂಟರ ಯುವ ಘಟಕದ ವತಿಯಿಂದ ಸ್ವಜಾತಿ ಬಂಧುಗಳಿಗಾಗಿ 6ನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ ಟೆನ್ನಿಸ್‍ಬಾಲ್ ಕ್ರಿಕೆಟ್ ಹಾಗೂ ಇತರ ಕ್ರೀಡಾಕೂಟ ತಾ. 11 ಮತ್ತು 12ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಂಟರ ಯುವ ಘಟಕದ ಅಧ್ಯಕ್ಷ ಶರತ್‍ಕುಮಾರ್ ಶೆಟ್ಟಿ ಹಾಗೂ ಇತರರು, ತಾ. 11ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ರವೀಂದ್ರ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ಡಿ. ಜಗದೀಶ್ ರೈ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ, ಯುವ ಉದ್ಯಮಿ ಜಯಪ್ರಕಾಶ್ ರೈ, ಮಡಿಕೇರಿ ತಾಲೂಕು ಬಂಟರ ಸಂಘದ ಉಪಾಧ್ಯಕ್ಷ ಸದಾಶಿವ ರೈ ಸೇರಿದಂತೆ ತಾಲೂಕು ಹಾಗೂ ವಿವಿಧ ಹೋಬಳಿ ಘಟಕದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಕಳೆದ ವರ್ಷದ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಹಾಗೂ ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಗುವದು ಎಂದ ಅವರು, ಉದ್ಘಾಟನೆ ಬಳಿಕ ಬಂಟರ ಯುವ ಘಟಕ ಹಾಗೂ ಪತ್ರಕರ್ತರ ತಂಡದ ನಡುವೆ ಕ್ರಿಕೆಟ್ ಪ್ರದರ್ಶನ ಪಂದ್ಯ ನಡೆಯಲಿದೆ. ನಂತರ ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, ಮಹಿಳೆಯರಿಗೆ ಥ್ರೋಬಾಲ್, ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತ, 5 ವರ್ಷದೊಳಗಿನ ಮಕ್ಕಳಿಗೆ ಕಪ್ಪೆ ಜಿಗಿತ, ನಾಲ್ಕನೇ ತರಗತಿವರೆಗಿನ ಮಕ್ಕಳಿಗೆ 50 ಮೀಟರ್ ಓಟ, 5ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಹಾಗೂ 8-10ನೇ ತರಗತಿವರೆಗಿನ ಮಕ್ಕಳಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ 100 ಮೀಟರ್ ಓಟದ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.ಕ್ರಿಕೆಟ್‍ಗೆ 25 ಹಾಗೂ ವಾಲಿಬಾಲ್‍ಗೆ 20 ತಂಡಗಳು ಈಗಾಗಲೇ ಹೆಸರು ನೋಂದಾಯಿಸಿದ್ದು, ಉಳಿದ ಸ್ಪರ್ಧೆಗಳಿಗೆ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶವಿದೆ ಎಂದು ಅವರು ನುಡಿದರು.
ತಾ. 12ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ರೈ, ಗೌರವಾಧ್ಯಕ್ಷ ಕೆ.ಆರ್. ಬಾಲಕೃಷ್ಣ ರೈ, ಉದ್ಯಮಿಗಳಾದ ರವೀಂದ್ರ ರೈ, ಸತೀಶ್ ರೈ, ಪುರುಷೋತ್ತಮ ರೈ, ಬೆಂಗಳೂರು ಸಮಾಜ ಸೇವಾ ವಿಭಾಗ ಮತ್ತು ಸೇವಾದಳ ಬಂಟರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಎಂ.ಬಿ. ಮಂದಾರ್ತಿ ಹಾಗೂ ಜಿಲ್ಲೆಯ ವಿವಿಧ ಘಟಕಗಳ ಪ್ರಮುಖರು ಪಾಳ್ಗೊಳ್ಳಲಿದ್ದಾರೆ ಎಂದರು.
ಸನ್ಮಾನ
ಸಮಾರೋಪ ಸಮಾರಂಭದಲ್ಲಿ ಸಮುದಾಯದ ವಿವಿಧ ಕ್ಷೇತ್ರದ ಸಾಧಕರಾದ ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಐತಪ್ಪ ರೈ, ಸಮಾಜಸೇವಕ ಉಮೇಶ್ ಶೆಟ್ಟಿ ಎಂ.ಬಿ. ಮಂದಾರ್ತಿ, ಮುಖ್ಯಮಂತ್ರಿ ಪದಕ ವಿಜೇತ ಎಎಸ್‍ಐ ಬಿ.ಕೆ. ಸುರೇಶ್ ರೈ, ಪ್ರಕೃತಿ ಮುನಿದ ಹಾದಿಯಲ್ಲಿ... ಕೃತಿ ಬರೆದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ಮಂಗಳೂರು ವಿವಿಯ ಎಂಎಸ್‍ಸಿ (ಬಯೋಕೆಮಿಸ್ಟ್ರಿ) ಚಿನ್ನದ ಪದಕ ವಿಜೇತ ನವ್ಯಾ ವಿಕಾಸ್ ರೈ ಅವರನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.
ಸಮಾರೋಪದ ಬಳಿಕ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಲ್ಲಡ್ಕದ ವಿಠಲ ನಾಯಕ್ ಮತ್ತು ಬಳಗದಿಂದ ‘ಗೀತ ಸಾಹಿತ್ಯ ಸಂಭ್ರಮ' ಸಂದೇಶ ಸಂತೋಷ ಜರುಗಲಿದ್ದು, ಮಡಿಕೇರಿಯ ಜಾದೂ ಕಲಾವಿದ ವಿಕ್ರಂ ಜಾದೂಗಾರ್ ಅವರಿಂದ ಮಾಯಾ ಮ್ಯಾಜಿಕ್ ಶೋ, ಸಮುದಾಯದ ಕಲಾವಿದರಿಂದ ನೃತ್ಯ ಹಾಗೂ ಸಾಂಸ್ಕøತಿಕ ವೈವಿಧ್ಯವಿರಲಿದೆ. ತುಳು ಭಾಷೆ ಹಾಗೂ ಸಂಸ್ಕøತಿ ಬಿಂಬಿಸುವ ಕಾರ್ಯಕ್ರಮಗಳನ್ನು ನೀಡಲು ಇಚ್ಛಿಸುವ ತಂಡ ಅಥವಾ ಕಲಾವಿದರು ತಾ. 10ರೊಳಗೆ ಸಾವಿತ್ರಿ ಉದಯ ಶೆಟ್ಟಿ (8861329447) ಅಥವಾ ಶಶಿಕಲಾ ಲೋಕೇಶ್ ರೈ (7019049806) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದೆಂದು ನುಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಸಂಚಾಲಕ ಮನೋಜ್ ಬಿನ್ನು ಶೆಟ್ಟಿ, ಕಿಶೋರ್ ರೈ ಕತ್ತಲೆಕಾಡು, ಮಡಿಕೇರಿ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಶಶಿಕಲಾ ಲೋಕೇಶ್ ರೈ ಹಾಗೂ ಮಡಿಕೇರಿ ನಗರ ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಸಾವಿತ್ರಿ ಉದಯ ಶೆಟ್ಟಿ ಉಪಸ್ಥಿತರಿದ್ದರು.