ವೀರಾಜಪೇಟೆ, ಮೇ 8: ದೇವಣಗೇರಿಯ ಪ್ಲಾಂಟರ್ಸ್ ಕ್ಲಬ್ ವತಿಯಿಂದ ದೇವಣಗೇರಿ ಪ್ರಾಥಮಿಕ ಶಾಲಾ ಮ್ಯೆದಾನದಲ್ಲಿ ಜಮ್ಮಾ ಕುಟುಂಬಗಳ ನಡುವೆ ಆಯೋಜಿಸಲಾಗಿದ್ದ ಫೈವ್‍ಸೈಡರ್ಸ್ ಫುಟ್ಬಾಲ್ ನಾಕೌಟ್ ಪಂದ್ಯಾಟದಲ್ಲಿ ಕಟ್ಟೆಮನೆ, ಪಂದಿಕಂಡ, ಅಡ್ಡೇಂಗಡ, ಒಕ್ಕಲಿಗರ, ಬೊಳಿಯಾಡಿರ, ಮಾಚಂಗಡ, ಮೂಕೋಂಡ, ಚಿರಿಯಪಂಡ, ಪಾರೋಂಗಡ, ಕೊಂಡಿರ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿವೆ.
ಕಟ್ಟೆಮನೆ ತಂಡ 2-0 ಗೋಲುಗಳಿಂದ ಪುಡಿಯಂಡ, ಪಂದಿಕಂಡ ತಂಡ-4-1 ಗೋಲುಗಳಿಂದ ಬೊಳ್ಳೆರ, ಅಡ್ಡೆಂಗಡ ತಂಡ 5-0 ಗೋಲುಗಳಿಂದ ಕಂಜಿತಂಡ, ಬೋಳಿಯಾಡಿರ ತಂಡ 3-0 ಗೋಲುಗಳಿಂದ ಆದೇಂಗಡ, ಒಕ್ಕಲಿಗರ ತಂಡ 4-1 ಗೋಲುಗಳಿಂದ ನುಚ್ಚಿಮಣಿಯಂಡ, ಮಾಚಂಗಡ ತಂಡ 1-0 ಗೋಲಿನಿಂದ ಮಳವಂಡ, ಮೂಕೋಂಡ ತಂಡ 4-0ಗೋಲುಗಳಿಂದ ಅಳಮೇಂಗಡ, ಚೇಂದಂಡ ತಂಡ ಬಾರದ ಕಾರಣ ಚೆರಿಯಪಂಡ, ಪುಗ್ಗೆರ ತಂಡ 4-1 ಗೋಲುಗಳಿಂದ ಪಾರೋಂಗಡ, ಕೊಂಡಿರ ತಂಡ 3-0 ಗೊಲುಗಳಿಂದ ಮಾಚೆಟ್ಟಿರ ತಂಡವನ್ನು ಪರಾಭವಗೊಳಿಸಿದೆ.